ಸಿಎಂ ಸಮ್ಮುಖದಲ್ಲೇ ಸಚಿವ ಅಶ್ವತ್ಥ್ ನಾರಾಯಣ್ ಮೇಲೆ ಹಲ್ಲೆಗೆ ಮುಂದಾದ ಡಿ.ಕೆ ಸುರೇಶ್ ಬೆಂಬಲಿಗರು

Team Newsnap
2 Min Read

ಡಿ.ಕೆ ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಜೊತೆ ಸಂಸದ ಡಿ.ಕೆ ಸುರೇಶ್ ಬೆಂಬಲಿಗರು, ಮೈಕ್ ಕಿತ್ತು ಅಶ್ವತ್ಥ್ ನಾರಾಯಣ್ ಮೇಲೆ ಹಲ್ಲೆಗೆ ಮುಂದಾದ ಘಟನೆ ರಾಮಗರದಲ್ಲಿ ಸಿಎಂ ಸಮ್ಮುಖದಲ್ಲೇ ಸೋಮವಾರ ಜರುಗಿದೆ

ರಾಮನಗರ ಜಿಲ್ಲೆಗೆ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾರ್ಯದ ಉದ್ಘಾಟನೆಗೆ ಮುಂದಾಗಿದ್ದಾರೆ. ಈ ವೇಳೆ ಇಡೀ ರಾಜ್ಯವೇ ತಲೆ ತಗ್ಗಿಸುವಂಥ ಘಟನೆ ನಡೆದಿದ್ದು,

ಸಿಎಂ ಬಸವರಾಜ ಬೊಮ್ಮಾಯಿ‌, ಜಿಲ್ಲಾ ಉಸ್ತುವಾರಿ ಅಶ್ವತ್ಥ್ ನಾರಾಯಣ್, ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಂದ ಕ್ರೇನ್ ಮೂಲಕ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಕಾರ್ಯಕ್ರಮ ಆಯೋಜಕರು ಸಂಸದ ಡಿ.ಕೆ ಸುರೇಶ್ ಹೆಸರು ಹೇಳುವುದನ್ನು ಮರೆತಿದ್ದಾರೆ ಎನ್ನಲಾಗಿದೆ. ಹೀಗಾಗಿ ತೀವ್ರವಾಗಿ ಕೋಪಗೊಂಡ ಬೆಂಬಲಿಗರು ಪ್ರತಿಮೆ ಅನಾವರಣ ವೇಳೆ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಗೆ ಜೈಕಾರ ಕೂಗಿದ್ದಾರೆ. ವೇದಿಕೆ ಮುಂಭಾಗದಲ್ಲಿ ಕುಳಿತ ಬೆಂಬಲಿಗರಿಂದ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಪರ ಘೋಷಣೆ ಕೇಳಿ ಬಂದಿದೆ.

ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಪರ ಜೈಕಾರ ಕೂಗಲಾಗಿದೆ. ಕೆಂಪೇಗೌಡ ಹಾಗೂ ಅಂಬೇಡ್ಕರ್ ಪ್ರತಿಮೆಯನ್ನು ಸರ್ಕಾರ ನಿರ್ಮಿಸಿದೆ, ಹೀಗಿದ್ದೂ ಪ್ರತಿಮೆ ನಿರ್ಮಾಣ ಮಾಡಿದ ಡಿ ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಗೆ ಜೈಕಾರ ಅಂತ ಬೆಂಬಲಿಗರು ಕೂಗಿದ್ದಾರೆ.

ಈ ವೇಳೆ ಎಚ್ಚೆತ್ತ ಸಚಿವ ಅಶ್ವತ್ಥ್ ನಾರಾಯಣ್, ಕೆಂಪೇಗೌಡ ಗೌಡ ಪ್ರತಿಮೆ ಅನಾವರಣ ವೇಳೆ ತಮ್ಮ ಬದಲಾಗಿ ಡಿ.ಕೆ ಸುರೇಶ್, ಸಿಎಂ ಬೊಮ್ಮಾಯಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಮೂಲಕ ಪುಷ್ಪ ನಮನ ಸಲ್ಲಿಸಿದ್ದಾರೆ.

ಇಲ್ಲಿಗೆ ಡಿ.ಕೆ ಸುರೇಶ್ ಬೆಂಬಲಿಗರು ಸಿಎಂ ವಿರುದ್ದ ಡಿ ಕೆ ಸುರೇಶ್ ಗೆ ಜೈಕಾರ ಕೂಗುತ್ತಾ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲ ವೇದಿಗೆ ಸಿಎಂ ಆಗಮಿಸುತ್ತಿದ್ದಂತೆ ವೇದಿಕೆ ಏರಿ ಅಲ್ಲಿಯೂ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ಮುಖಂಡರು ಡಿ.ಕೆ ಶಿವಕುಮಾರ್ ಪರ ಜೈಕಾರ ಹಾಕಿದ್ದಾರೆ. ಈ ಹೈಡ್ರಾಮಾ ಬಳಿಕ ಪರಿಸ್ಥಿತಿ ತಿಳಿಯಾಗಿತ್ತು.

ರವಿ ಮೈಕ್ ಕಿತ್ತು ಹಲ್ಲೆಗೆ ಯತ್ನ :

ನಂತರ ಮಾತನಾಡಲು ಎದ್ದು ನಿಂತ ಅಶ್ವತ್ಥ್ ನಾರಾಯಣ್, ಯಾವುದೋ ನಾಲ್ಕು ಬೆಂಬಲಿಗರನ್ನು ಕರೆದುಕೊಂಡು ಬಂದು ವೇದಿಕೆ ಮೇಲೆ ಘೋಷಣೆ ಕೂಗೋದು ಅಲ್ಲ.

ಗಂಡಸ್ತನ ಇದ್ದರೆ ಅಭಿವೃದ್ಧಿ ಕಾರ್ಯಮಾಡಿ ತೋರಿಸಿ ಅಂತಾರೆ. ಆಗ ಕುಪಿತರಾದ ಡಿ.ಕೆ ಸುರೇಶ್ ಅಶ್ವತ್ಥ್ ನಾರಾಯಣ ಬಳಿ ಬಂದು ಕೈ ಕೈ ಮಿಲಾಯಿಸಲು ಮುಂದಾಗ್ತಾರೆ. ಆ ವೇಳೆ ಅವರ ಬೆಂಬಲಕ್ಕೆ ಬಂದ ಕಾಂಗ್ರೆಸ್ ಎಂಎಲ್​ಸಿ ಎಸ್​.ರವಿ, ಮೈಕ್​ ಕಿತ್ತು ಹಲ್ಲೆಗೆ ಮುಂದಾದರು.

Share This Article
Leave a comment