ರೈತರು ನನಗಾಗಿ ಸತ್ತರೇ ಎಂದು ಮೋದಿ ಕೇಳಿದರು – ಮೇಘಾಲಯ ರಾಜ್ಯಪಾಲ ಮಲ್ಲಿಕ್. ವಾಗ್ದಾಳಿ

Team Newsnap
1 Min Read

ರೈತರು ನನಗಾಗಿ ಸತ್ತರೇ ಎಂದು ಪ್ರದಾನಿ ಮೋದಿ ಹೇಳಿರುವುದಾಗಿ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ವಾಗ್ದಾಳಿ ಮಾಡಿದರು.

ಕೃಷಿ ಕಾಯ್ದೆಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರೈತರು ಮೃತಪಟ್ಟಿರುವ ಬಗ್ಗೆ ಪ್ರಧಾನಿ ಮೋದಿ ಅವರು ಹಗುರವಾಗಿ ಮಾತನಾಡಿದ್ದಾರೆ ಎಂದು ಮೇಘಾಲಯ ರಾಜ್ಯಪಾಲರು ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿ ಗಡಿಭಾಗಗಳಲ್ಲಿ 1 ವರ್ಷ ನಡೆದ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೆ.

ಈ ಪ್ರತಿಭಟನೆಯಲ್ಲಿ 500 ರೈತರು ಮೃತಪಟ್ಟಿದ್ದಾರೆ ಎಂದು ಮೋದಿ ಅವರಿಗೆ ತಿಳಿಸಿದೆ. ಅದಕ್ಕೆ ʼಅವರು ನನಗಾಗಿ ಸತ್ತರೇʼ ಎಂದು ಪ್ರಧಾನಿ ಮೋದಿ ಅವರು ರೈತರ ಬಗ್ಗೆ ಸೊಕ್ಕಿನಿಂದ ಮಾತನಾಡಿದ್ದಾರೆ ಎಂದು ಮೇಘಾಲಯ ರಾಜ್ಯಪಾಲ ವಾಗ್ದಾಳಿ ನಡೆಸಿದ್ದಾರೆ.

ರೈತರು ಪ್ರತಿಭಟನೆ ಸಂದರ್ಭದಲ್ಲಿ ನಿಮ್ಮದೇ ಸರ್ಕಾರ ಆಡಳಿತದಲ್ಲಿದೆ ಎಂದು ನಾನು ಪ್ರಧಾನಿ ಮೋದಿ ಅವರಿಗೆ ಪ್ರತ್ಯುತ್ತರ ನೀಡಿದೆ. ಈ ವೇಳೆ ಅಮಿತ್‌ ಶಾ ಅವರನ್ನು ಭೇಟಿಯಾಗುವಂತೆ ಮೋದಿ ಅವರು ನನಗೆ ತಿಳಿಸಿದರು.

ಅಮಿತ್ ಶಾ ಅವರನ್ನೂ ಭೇಟಿಯಾಗಿದ್ದೇನೆ. ಪ್ರಧಾನಿ ಮೋದಿ ಒಬ್ಬ ಸೊಕ್ಕಿನ ಮನುಷ್ಯ ಒಬ್ಬ ದುರಹಂಕಾರಿ
ಪ್ರಧಾನಿ ನರೇಂದ್ರ ಮೋದಿ ಒಬ್ಬ ದುರಹಂಕಾರಿ. ರೈತರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದು ಮಲಿಕ್‌ ಹರಿಯಾಣದ ದಾದ್ರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಗರಂ ಅಗಿ ಮಾತನಾಡಿದರು.

Share This Article
Leave a comment