ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿಯ ಕಾರಿನ ಮೇಲೆ ಗುಂಡಿನ ದಾಳಿ – ಪಾರು

Team Newsnap
1 Min Read

ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ರ ಮಾಜಿ ಪತ್ನಿ ರೇಹಮ್ ಅವರ ಕಾರಿನ ಮೇಲೆ ಗುಂಡಿನದಾಳಿಯಾಗಿದೆ.

ಈ ವಿಷಯ ಕುರಿತು ಕೋಪಗೊಂಡ ರೇಹಮ್, ಇಮ್ರಾನ್ ಖಾನ್ ವಿರುದ್ಧ ಟ್ವಿಟ್ಟರ್‌ನಲ್ಲಿ ವಾಗ್ದಾಳಿ ಮಾಡಿದ್ದಾರೆ.

ನಾನು ನನ್ನ ಸಂಬಂಧಿಯೊಬ್ಬರ ವಿವಾಹ ಸಮಾರಂಭದಿಂದ ಭಾನುವಾರ ರಾತ್ರಿ ವಾಪಸ್ ಬರುತ್ತಿದ್ದೆ.

ಆಗ ನನ್ನ ಕಾರಿನ ಮೇಲೆ ಗುಂಡಿನ ದಾಳಿಯಾಗಿದೆ. ಮೋಟರ್ ಸೈಕಲ್ ಮೇಲೆ ಬಂದ ಇಬ್ಬರು ಅಪರಿಚಿತರು ಗುಂಡು ಹಾರಿಸಿದ್ದಾರೆ.

ನನ್ನ ಆಪ್ತ ಕಾರ್ಯದರ್ಶಿ ಮತ್ತು ಚಾಲಕ ಕೂಡ ಕಾರಿನಲ್ಲಿ ಇದ್ದರು. ಅದೃಷ್ಟಕ್ಕೆ ಏನೂ ಅಪಾಯ ಆಗಲಿಲ್ಲ. ಇಮ್ರಾನ್ ಖಾನ್ ಆಡಳಿತದ ಹೊಸ ಪಾಕಿಸ್ತಾನ, ಈಗ ಹೇಡಿಗಳು, ಕೊಲೆಗಡುಕರು, ದುರಾಸೆಬುರುಕರ ರಾಜ್ಯವಾಗಿದೆ ಎಂದು ಹೇಳಿದ್ದಾರೆ.

Share This Article
Leave a comment