ಬಿಪಿಎಲ್ ಪಡಿತರದಾರರಿಗೆ ಈವರೆಗೆ ವಿತರಿಸುತ್ತಿದ್ದ 5 ಕೆಜಿ ಜೊತೆಗೆ 1 ಕೆಜಿ ಹೆಚ್ಚುವರಿಯಾಗಿ ಅಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್) ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು. ಈಗ 1 ಕೆಜಿ ಹೆಚ್ಚುವರಿ ಸೇರಿದಂತೆ ಒಟ್ಟು 6 ಕೆಜಿ ಅಕ್ಕಿ ವಿತರಿಸಲಾಗುವುದು. ಜಿಪಂ ತಾಪಂ ಚುನಾವಣೆ:ಕ್ಷೇತ್ರ ಮರು ವಿಂಗಡಣೆ ಕರಡು ಪಟ್ಟಿ ಪ್ರಕಟ
ರಾಜ್ಯದಲ್ಲಿರುವ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುತ್ತಿರುವ 5 ಕೆಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು 1 ಕೆಜಿ ಅಕ್ಕಿಯನ್ನು ವಿತರಿಸಲು ಸರ್ಕಾರ ಆದೇಶಿಸಿದೆ.
ಚುನಾವಣೆ ಸಮೀಪದಲ್ಲಿರುವ ಹೊತ್ತಿನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಮಾವೇಶವೊಂದರಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಡಿತರದಾರರಿಗೆ 10 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ಸದ್ಯ ನೀಡುತ್ತಿರುವ ಪಡಿತರ ಜೊತೆಗೆ 1 ಕೆಜಿ ಹೆಚ್ಚುವರಿ ಅಕ್ಕಿ ನೀಡುವುದಾಗಿ ತಿಳಿಸಿದೆ.
- ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
- ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
- ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ
- ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್
- ಪತ್ರಕರ್ತ ಹೊನಕೆರೆ ನಂಜಂಡೇಗೌಡರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರಕಟ
- ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ