ರಾಜಧಾನಿಯಲ್ಲಿ ಮತ್ತೊಂದು ಸಾಮೂಹಿಕ ಆತ್ಮಹತ್ಯೆ ದುರಂತ ತಲ್ಲಣವಾಗುವಂತೆ ಮಾಡಿದೆ.
ಗಂಡ ಸಾವಿನ ಜಿಗುಪ್ಸೆಯಲ್ಲಿ ಇಬ್ಬರು ಮಕ್ಕಳ ಸಮೇತ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಪ್ರಕೃತಿ ಲೇಔಟ್ನಲ್ಲಿ ಜರುಗಿದೆ.
ಮೃತರನ್ನು ವಸಂತಾ(40), ಯಶವಂತ್ (15) ಹಾಗೂ ನಿಶ್ಚಿತಾ (6) ಎಂದು ಗುರುತಿಸಲಾಗಿದೆ.
ಕಳೆದ ಐದು ತಿಂಗಳ ಹಿಂದೆ ಮಾರಕ ಕೊರೋನಾದಿಂದ ಮನೆಯ ಯಜಮಾನ, ಪತಿ ಪ್ರಸನ್ನ ಕುಮಾರ್ ಬಲಿಯಾಗಿದ್ದರು.
ಕೆಎಸ್ ಆರ್ ಟಿಸಿ ಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಪ್ರಸನ್ನ ಕುಮಾರ್ ಸಾವಿನಿಂದ ಜೀವನ ನಡೆಸಲಾಗದೇ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಮನೆ ಸಾಲ ಕಟ್ಟಲು ಸಾಧ್ಯವಾಗದೇ ಸ್ವಾಭಿಮಾನ ಕ್ಕೆ ಅಂಜಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.
ನಿತ್ಯ ಜೀವನ ನಡಸುವುದು ಕಷ್ಟವಾಗಿದೆ ಎನ್ನುವ ನಕಾರಣಕ್ಕೆ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಈ ಕುಟುಂಬ ಪ್ರಯತ್ನ ಮಾಡಿತ್ತು.
ಮನೆಯಲ್ಲೇ ತಾಯಿ ಹಾಗೂ ಇಬ್ಬರು ಮಕ್ಕಳು ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಧಾರವಾಡದಲ್ಲಿ ನಕಲಿ ನೋಟು ಚಲಾವಣೆ: ಬಿಜೆಪಿ ಮುಖಂಡ ಸೇರಿ ಮೂವರು ಬಂಧನ
ಮಗಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಂತವೈದ್ಯೆ – ಸಾವಿಗೆ ಹಲವು ಅನುಮಾನ
ಪ್ರವೀಣ್ ನೆಟ್ಟಾರು ಹತ್ಯೆ – ಮತ್ತಿಬ್ಬರು ಸೇರಿ 6 ಮಂದಿ ಬಂಧನ