December 19, 2024

Newsnap Kannada

The World at your finger tips!

crime

ಮೋಜು ಮಸ್ತಿಗಾಗಿ ಪ್ರಿಯಕರನಿಂದ ದೊಡ್ಡಪ್ಪನ ಮನೆಯಲ್ಲೇ ಕನ್ನ ಹಾಕಿಸಿದ ಯುವತಿ ದೀಕ್ಷಿತಾ !

Spread the love

ಮೋಜು ಮಸ್ತಿಗಾಗಿ ದೊಡ್ಡಪ್ಪನ ಮನೆಯಲ್ಲೇ ತನ್ನ ಪ್ರಿಯಕರನಿಂದ ಕಳ್ಳತನ ಮಾಡಿಸಿ 19 ರ ಪ್ರಾಯದ ಯುವತಿಯೊಬ್ಬಳು ಪೊಲೀಸರ ಅತಿಥಿಯಾಗಿದ್ದಾಳೆ

ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ದೀಕ್ಷಿತಾ (19), ಮಧು (19) ಎಂಬ ಬಂಧಿತರಿಂದ 30 ಸಾವಿರ ನಗದು, 200ಗ್ರಾಂ ನಷ್ಟು ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ತಾನು ಪ್ರೀತಿ ಮಾಡುತ್ತಿದ್ದ ಮಧು ಬಳಿ ಖರ್ಚಿಗೆ ಹಣವಿಲ್ಲ ಎಂದಿದ್ದಕ್ಕೆ ಬಿಕಾಂ ಓದುತ್ತಿದ್ದ ದೀಕ್ಷಿತಾ ಖತರ್ನಾಕ್ ಫ್ಲಾನ್​ ಮಾಡಿದ್ದಳು ಎನ್ನಲಾಗಿದೆ. 15 ವರ್ಷದ ಹುಡುಗನಿಗೆ 33 ಲಕ್ಷ ರು ಸಂಬಳದ ಆಫರ್ ಕೊಟ್ಟ ಅಮೇರಿಕಾ ಕಂಪನಿ !

ಮಾಟ ಮಂತ್ರದ ಮಂಕು ಬೂದಿ ಎರಚಿ ದೊಡ್ಡಪ್ಪನ ಮನೆಯಲ್ಲೇ ಕಳ್ಳತನ ಮಾಡಲು ಮೆಡಿಕಲ್ ಓದುತ್ತಿದ್ದ ಲವರ್ ಮಧು ಜೊತೆ ಸೇರಿ ಇಬ್ಬರು ಪ್ಲಾನ್​ ಸಿದ್ಧಪಡಿಸಿದ್ದಳಂತೆ. ಇದರಂತೆ ಮಾಟ ಮಂತ್ರದ ವಸ್ತುಗಳನ್ನು ಮನೆಯ ಕಾಂಪೌಂಡ್​​ನಲ್ಲಿಟ್ಟು ಮನೆಯವರ ಗಮನ ಬೇರೆಡೆ ಸೆಳೆದಿದ್ದರು.

ಪ್ಲಾನ್​ನಂತೆ ಮನೆಯ ಕಾಂಪೌಂಡ್ ಬಳಿ ನಿಂಬೆ ಹಣ್ಣು ಎಲ್ಲಾ ಇಟ್ಟು ಮನೆಯವರೆಲ್ಲರನ್ನು ದೀಕ್ಷಿತಾ ಹೊರಗೆ ಕರೆದಿದ್ದಳು. ಮನೆಯವರು ಹೊರ ಬರುತ್ತಿದ್ದಂತೆ ಮನೆಯ ಮುಂದೆ ಯಾರೋ ವಾಮಾಚಾರ ಮಾಡಿದ್ದಾರೆ ಎಂದು ಯುವತಿ ಕಥೆ ಕಟ್ಟಿದ್ದಳು. ಒಂದೇ ನಾಣ್ಯಕ್ಕೆ ಎರಡು ಮುಖಗಳು(ಬ್ಯಾಂಕರ್ಸ್ ಡೈರಿ)

ಮಾಟ ಮಂತ್ರದ ವಸ್ತುಗಳನ್ನು ಶುಚಿಗೊಳಿಸುವ ಗ್ಯಾಪ್​​ನಲ್ಲಿ ತನ್ನ ಕೈಚಳಕ ತೋರಿದ್ದ ಮಧು, ಮನೆಯಲ್ಲಿದ್ದ 90 ಸಾವಿರ ರೂಪಾಯಿ ಹಣ, 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು.

ಈ ಘಟನೆ ಕುರಿತಂತೆ ದೂರು ಬಂದ ತಕ್ಷಣ ವಿಚಾರಣೆ ಆರಂಭಿಸಿದ ಪೊಲೀಸರಿಗೆ ಲವ್ವರ್ಸ್ ಕಳ್ಳಾಟ ತಿಳಿದು ಬಂದಿದೆ. ಬಂಧಿತ ದೀಕ್ಷಿತಾ, ಬಿಕಾಂ ಓದುತ್ತಿದ್ದು, ಮಧು ಮೆಡಿಕಲ್ ಓದುತ್ತಿದ್ದ. ಖರ್ಚು ಮಾಡಲು ಹಣವಿಲ್ಲದ ಕಾರಣ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!