ಇತ್ತೀಚಿಗೆ ದಿನಕ್ಕೆ ಒಂದಿಲ್ಲೊಂದು ಅತ್ಯಾಚಾರದ ಪ್ರಕರಣಗಳು ಕೇಳಿ ಬರುತ್ತಿವೆ. ಈಗ ಇಲ್ಲೊಂದಷ್ಟು ದುಷ್ಕರ್ಮಿಗಳು ಭಾರತದ ಪ್ರಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಮಗಳನ್ನು ಅತ್ಯಾಚಾರ ಮಾಡುವದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಮ್ಯಾಚ್‌ನಲ್ಲಿ ಪ್ರತಿಬಾರಿಯಂತೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾಜಿಕ್ ತೋರಿಸಲಾಗುತ್ತಿಲ್ಲ. ಕಳೆದ 12 ಸರಣಿಗಳಿಗೆ ಹೋಲಿಕೆ ಮಾಡಿದಲ್ಲಿ, ಈ ಸರಣಿಯ ಪಂದ್ಯಗಳಲ್ಲಿ ಸಿಎಸ್‌ಕೆ ಸರಿಯಾದ ಆಟವಾಡುತ್ತಿಲ್ಲ. ಇದರಿಂದ ಆಕ್ರೋಶಗೊಂಡಿರುವ ಕೆಲವು ದುಷ್ಕರ್ಮಿಗಳು ದೋನಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಪಂದ್ಯಗಳಲ್ಲಿ ಸರಿಯಾಗಿ ಆಡದಿದ್ದರೆ ಅವರ 6 ವರ್ಷದ ಮಗಳನ್ನು ಅತ್ಯಾಚಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಇದನ್ನು ಗಮನಿಸಿದರೆ ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಕಳವಳ ಮೂಡದೇ ಇರದು. ಕೇವಲ 6 ವರ್ಷದ ಮಗುವಿಗೆ ತನ್ನ ತಂದೆಯ ಪ್ರೀತಿಯ ಹೊರತು ಬಾಹ್ಯ ಪ್ರಪಂಚದಲ್ಲಿ ಆತನ ಕೆಲಸ ಎಂತಹುದು? ಜವಾಬ್ದಾರಿ ಎಂತಹದು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಅಂತಹ ಹಸುಳೆ ಈ ವಿಕೃತ ಮನಸ್ಸಿನವರಿಗೆ ಏನು ಮಾಡಿದ್ದಾಳು?
ಅಲ್ಲದೇ ಪಂದ್ಯ ಎಂದ ಮೇಲೆ ಅದರಲ್ಲಿ ಒಬ್ಬರು ಸೋಲಬೇಕು. ಒಬ್ಬರು ಗೆಲ್ಲಬೇಕು. ಆದರೆ ಪಂದ್ಯವನ್ನು ಅತಿರೇಕಕ್ಕೆ ತೆಗೆದುಕೊಂಡು ಬೆದರಿಕೆ ಹಾಕುವ ಇಂತಹ ವಿಕೃತ ಮನಸ್ಸಿನವರ ಮೇಲೆ ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳಬೇಕು


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ