ರಾಜಸ್ಥಾನ ರಾಯಲ್ಸ್ ಗೆ ಮುಖಭಂಗ ಡೆಲ್ಲಿ ಕ್ಯಾಪಿಟಲ್ ಗೆ ಅದ್ಭುತ ಗೆಲುವು

Team Newsnap
1 Min Read
source - instagram credits - iplt20

ಐಪಿಎಲ್ 20-20ಯ 23 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 46 ರನ್‌ಗಳ ವಿಜಯ ಸಾಧಿಸಿತು.

ದುಬೈನ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರಾಜಸ್ಥಾನ್ ರಾಯಲ್ಸ್ ತಂಡ ಟಾಸ್ ಗೆದ್ದು ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಡಿಸಿ ತಂಡದ ಆರಂಭಿಕ ಆಟಗಾರರಾಗಿ ಫೀಲ್ಡ‌್‌ಗೆ ಎಂಟ್ರಿ ಕೊಟ್ಟ ಪೃಥ್ಷಿ ಶಾ ಹಾಗೂ ಶಿಖರ್ ಧವನ್ ಅವರ ಆಟ ನೀರಸವಾಗಿತ್ತು. ಧವನ್ ಹಾಗೂ ಶಾ ಕ್ರಮವಾಗಿ ಕೇವಲ 5 ಹಾಗೂ 19 ರನ್ ಗಳಿಗೆ ಪೆವಿಲಿಯನ್ ಸೇರಿದರು. ನಂತರ ಮೈದಾನಕ್ಕಿಳಿದ ತಂಡದ ನಾಯಕ‌ ಐಯ್ಯರ್ ಸಹ 22 ರನ್‌ಗಳ ಸಾಧಾರಣ ಗಳಿಕೆ ಮಾಡಿ ಔಟಾದರು. ತಂಡವು ಗೆಲ್ಲಲು ಹೋರಾಡಿದ್ದು ಎಂ. ಸ್ಟೊಯಿನಿಸ್ ಹಾಗೂ ಎಸ್. ಹೆಟ್ಮಿಯರ್. ಸ್ಟೊಯಿನಿಸ್ 30 ಎಸೆತಗಳಲ್ಲಿ 39 ರನ್ ಮತ್ತು ಹೆಟ್ಮಿಯರ್ 24 ಎಸೆತಗಳಲ್ಲಿ 45 ರನ್ ಗಳಿಸಿ ತಂಡ ಗೆಲ್ಲುವಲ್ಲಿ ಸಹಾಯಕರಾದರು. ಡಿಸಿ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.

dc vs rr1
source – Instagram
credits – iplt20

ಪ್ರತಿಯಾಟವನ್ನು ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ತಂಡ ನಿರೀಕ್ಷಿತ ಮಟ್ಟಕ್ಕೆ ಪ್ರದರ್ಶನವನ್ನು ನೀಡಲು ವಿಫಲವಾಯ್ತು. ಆರ‌ಆರ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಜೆ. ಬಟ್ಲರ್‌ ಅವರ ಆಟ ಆಕರ್ಷಕವಾಗಿರಲಿಲ್ಲ. ಕೇವಲ 13 ರನ್‌ಗಳಿಗೆ ಬಟ್ಲರ್ ಔಟಾದರು. ಜೈಸ್ವಾಲ್ 36 ರನ್‌ಗಳ ಸಾಮಾನ್ಯ ಮೊತ್ತವನ್ನು ತಂಡಕ್ಕೆ ನೀಡಿದರು. ರಾಹುಲ್ ತೇವಾಟಿಯಾ (29 ಎಸೆತಗಳಿಗೆ 38 ರನ್) ಹಾಗೂ ಸ್ಮಿತ್ (17 ಎಸೆತಗಳಿಗೆ 24 ರನ್) ಗಳಿಸಿದರಾದರೂ ತಂಡ ಸೋಲನ್ನು ಕಾಣಲೇಬೇಕಾಯ್ತು. ಡಿಸಿ ತಂಡದ ಕೆ. ರಬಾಡ, ಸ್ಟೊಯಿನಿಸ್ ಹಾಗೂ ಆರ್. ಅಶ್ವಿನ್ ಅವರ ಬೌಲಿಂಗ್ ರಾಜಸ್ಥಾನ್ ತಂಡವನ್ನು ಕಟ್ಟಿಹಾಕಿದ್ದಂತೂ ಸುಳ್ಳಲ್ಲ. ರಾಜಸ್ಥಾನ್ ತಂಡ 19.4 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಪಂದ್ಯದಲ್ಲಿ ಪರಾಭವಗೊಂಡಿತು.

Share This Article
Leave a comment