ಪಾಂಡವಪುರ ಬಳಿ ಬನಘಟ್ಟದಲ್ಲಿ ದರೋಡೆಕೋರರಿಗೆ ಗ್ರಾಮಸ್ಥರಿಂದ ಧರ್ಮದೇಟು : ವಿಡಿಯೋ ನೋಡಿ

Team Newsnap
1 Min Read

ರಸ್ತೆ ರಾಬರಿಗೆ ಸಿದ್ದತೆ ಪ್ರಯತ್ನ ನಡೆಸಿದ ನಾಲ್ವರ ಪೈಕಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು ಧರ್ಮದೇಟು ಹಾಕಿ ಮರಕ್ಕೆ ಕಟ್ಟಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನ್ನಘಟ್ಟದಲ್ಲಿ ಜರುಗಿದೆ.

ನಾನು ಭ್ರಷ್ಟಾಚಾರಿ ಅಲ್ಲ: ಮೇಲುಕೋಟೆ ದೇವರ ಎದುರು ಆಣೆ ಮಾಡಲು ಸಿದ್ದ – ಸಂಸದೆ ಸುಮಲತಾ ಸವಾಲು

ಇನೋವಾ ಕಾರಿನಲ್ಲಿ ಬಂದಿದ್ದ ನಾಲ್ಕು ಮಂದಿ ದರೋಡೆಕೋರರು ಕೈಯಲ್ಲಿ ಗನ್ ಹಿಡಿದು ಕಾರೊಂದನ್ನು ಅಡ್ಡಗಟ್ಟಿ ದರೋಡೆಗೆ ಯತ್ನ ಮಾಡಿದರು.

ಕಾರಿನ ಚಾಲಕ ಕಿರುಚುತ್ತಿದ್ದಂತೆ ಎಚ್ಚೆತ್ತ ಗ್ರಾಮಸ್ಥರು ದರೋಡೆಕೋರರ ಮೇಲೆ ದಾಳಿ ಮಾಡಿ ಸುತ್ತುವರಿಯುತ್ತಿದ್ದಂತೆ ಇಬ್ಬರು ಎಸ್ಕೇಪ್ ಆದರೆ ಮತ್ತಿಬ್ಬರು ಗ್ರಾಮಸ್ಥರ ಕೈಗೆ ಸಿಕ್ಕಿದ್ದೇ ತಡ ಹಿಗ್ಗಾ ಮುಗ್ಗಾ ಥಳಿಸಿ, ಮರಕ್ಕೆ ಕಟ್ಟಿ ಹಾಕಿದರು. ಅವರ ಕೈಯಲ್ಲಿದ್ದ ಗನ್ ಕಿತ್ತು ಕೊಂಡರು.

ನಂತರ ಪಾಂಡವಪುರ ಪೊಲೀಸರ ಭೇಟಿ, ಪರಿಶೀಲನೆ. ಪರಾರಿ ಆದ ಇನ್ನಿಬ್ಬರು ದರೋಡೆಕೋರರಿಗಾಗಿ ಖಾಕಿ ಹುಡುಕಾಟ ನಡೆಸಿದೆ.

ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment