ಮೇಲುಕೋಟೆಯ ಚಲುವನಾರಾಯಣ ಸ್ವಾಮಿಯನ್ನೂ ಬಿಡದ ‘ಧರ್ಮ ಸಂಕಟ’

Team Newsnap
1 Min Read

ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ಮತ್ತೆ ‘ಧರ್ಮ ಸಂಕಟ’ ಶುರುವಾಗಿದೆ.

ಮುಸ್ಲಿಂಮರು ತಯಾರಿಸುವ ಹಿಂದೂ ದೇವರ ವಿಗ್ರಹಗಳನ್ನು ಖರೀದಿಸಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡದಂತೆ ಹೊಸ ಅಭಿಯಾನ ಆರಂಭಿಸಲು ಸಿದ್ದತೆ ನಡೆದಿದೆ.

ಈ ಕುರಿತಂತೆ ಮೇಲುಕೋಟೆ ಸ್ಥಾನಿಕ ಶ್ರೀನಿವಾಸ್ ಅಯ್ಯಂಗಾರ್ ಹೇಳಿಕೆ ನೀಡಿ ಮುಸ್ಲಿಂಮವರು ತಯಾರಿಸಿದ ವಿಗ್ರಹ ಪೂಜೆ ಶಾಸ್ತ್ರದಲ್ಲಿ ನಿಷೇಧವಿದೆ. ಹೀಗಾಗಿ ನಿಷೇಧ ಅಭಿಯಾನ ಆರಂಭಿಸುವುದಾಗಿ ಹೇಳಿದ್ದಾರೆ

ರಾಜ್ಯದ ಎಲ್ಲಾ ದೇವಸ್ಥಾನದ ಅರ್ಚಕರುಗಳಿಗೆ ಈ ಕುರಿತಂತೆ ನೀಡಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.

ವರದಿ ಕೇಳಿರುವ ಡಿಸಿ :
ಚಲುವನಾರಾಯಣ ಸ್ವಾಮಿಗೆ ಸಲ್ಲುವ ದೀವಟಿಗೆ ಸಲಾಂ ಆರತಿಯನ್ನು ಸ್ಥಗಿತ ಮಾಡಿ ಸಂಧ್ಯಾರಾತಿ ಎಂದು ಹೊಸ ನಾಮಕರಣ ಮಾಡವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಡಿಸಿ ಅಶ್ವತಿ ದೇವಸ್ಥಾನದ ಇಓ ಹಾಗೂ ಪಾಂಡವಪುರ ಎಸಿ ಬಳಿ ಈ ಕುರಿತಂತೆ ವರದಿ ಕೇಳಿದ್ದಾರೆ.

ದೇವಸ್ಥಾನ ಆರತಿಗೆ ಸಲಾಂ ಪದದ ಬಳಕೆಯನ್ನು ತೆಗೆದು ಹಾಕಿ ಸಂಧ್ಯಾರಾತಿ ಎಂದು ನಾಮಕರಣ ಮಡುವಂತೆ ಧಾರ್ಮಿಕ ಪರಿಷತ್ ಒತ್ತಾಯಿಸಿದೆ.

Share This Article
Leave a comment