ಬಿಜೆಪಿಯ ವಿವಾದಿತ ನಾಯಕಿ ನೂಪುರ್ ಶರ್ಮಾಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಬೆಂಬಲ ವ್ಯಕ್ತಪಡಿಸಿದ್ದ ಟೈಲರ್ ಕನ್ನಯ್ಯ ಲಾಲ್ ಅವರ ರುಂಡ ಕತ್ತರಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಉದಯಪುರದ ಮಲ್ಡಾಸ್ ಸ್ಟ್ರೀಟ್ನಲ್ಲಿರುವ ಟೈಲರಿಂಗ್ ಅಂಗಡಿಯೊಳಗೆ ಬಂದಿದ್ದ ದುಷ್ಕರ್ಮಿಗಳು ಬಟ್ಟೆ ಹೊಲಿಸಲು ಕೊಡುವ ಸೋಗಿನಲ್ಲಿ ಒಳಕ್ಕೆ ಹೋಗಿದ್ದ. ಅಲ್ಲಿ ಟೈಲರ್ ಅಳತೆ ತೆಗೆದುಕೊಂಡು ಬರೆದುಕೊಳ್ಳುವಷ್ಟರಲ್ಲಿ ದಾಳಿ ನಡೆಸಿದ ಇವರು ಹಲ್ಲೆ ಮಾಡಿ, ರುಂಡ ಕತ್ತರಿಸಿ ಪರಾರಿಯಾಗಿದ್ದರು.
ಘಟನೆ ಬಳಿಕ ಸ್ಥಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಈ ಕೊಲೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಜೀವ ಬೆದರಿಕೆಯೊಡ್ಡಿದ್ದರು.
ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ನಿರ್ದೇಶಕ ಹುದ್ದೆಗೆ ರಾಜೀನಾಮೆ – ನೂತನ ಸಾರಥಿ ನೇಮಕ
ಮುಖ ಕಾಣಿಸದಂತೆ ಹೆಲ್ಮೆಟ್ ಹಾಕಿಕೊಂಡು ಬೈಕ್ನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ರಜ್ಸಾಮಂಡ್ ಎಸ್ಪಿ ಸುಧೀರ್ ಚೌಧರಿ ತಿಳಿಸಿದ್ದಾರೆ. ಬಂಧಿತರೇ ಆರೋಪಿಗಳು ಎನ್ನುವುದು ಖಚಿತವಾಗಿದೆ. ಅಲ್ಲದೆ ತನಿಖೆ ಕೈಗೊಂಡು ಇನ್ನುಳಿದ ಆರೋಪಿಗಳನ್ನೂ ಪತ್ತೆ ಮಾಡಲು ಹತ್ತು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ