ಮುಖೇಶ್​ ಅಂಬಾನಿ ರಿಲಯನ್ಸ್‌ ಜಿಯೋ ನಿರ್ದೇಶಕ ಹುದ್ದೆಗೆ ರಾಜೀನಾಮೆ – ನೂತನ ಸಾರಥಿ ನೇಮಕ

Team Newsnap
1 Min Read
Mukesh Ambani resigns as Reliance Jio Director ಮುಖೇಶ್​ ಅಂಬಾನಿ ರಿಲಯನ್ಸ್‌ ಜಿಯೋ ನಿರ್ದೇಶಕ ಹುದ್ದೆಗೆ ರಾಜೀನಾಮೆ - ನೂತನ ಸಾರಥಿ ನೇಮಕ #thenewsnap #shocking_news #Ambani #latestnews #JIO #reliance #Mukesh_Ambani #breaking_news #entrepreneur #businessman #richest_man

ಉದ್ಯಮಿ ಮುಖೇಶ್‌ ಅಂಬಾನಿ ರಿಲಯನ್ಸ್‌ ಜಿಯೋ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ಮುಖೇಶ್‌ ಅಂಬಾನಿ ಅವರ ಮಗ 30 ವರ್ಷದ ಆಕಾಶ್ ಅಂಬಾನಿ ನೂತನ ಛೇರ್ಮನ್​​ ಎಂದು ಮಂಗಳವಾರ ಘೋಷಣೆ ಮಾಡಲಾಗಿದೆ.

ಆಕಾಶ್​ ಅವರನ್ನು ಕಾರ್ಯನಿರ್ವಾಹಕೇತರ ನಿರ್ದೇಶಕ, ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಜೂನ್​ 27ರಂದು ನಡೆದ ಸಭೆಯಲ್ಲಿ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ ಎಂದು ರಿಲಯನ್ಸ್​ ಜಿಯೊ ಇನ್​ಫೋಕಾಮ್​ ಕಂಪೆನಿಯು ಮಾಹಿತಿ ನೀಡಿದೆ.ಆಕಾಶ್ ಅಂಬಾನಿ ರಿಲಯನ್ಸ್‌ ಜಿಯೋ ನಾನ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದರು. ಈಗ ನೂತನ ಛೇರ್ಮನ್ ಆಗಿ ಆಯ್ಕೆಗೊಂಡಿದ್ದಾರೆ.ಇದನ್ನು ಓದಿ –ಬಿಜೆಪಿ ಎಂದರೆ ಬಲಿಷ್ಟರು, ಬಲ್ಲಿದರ ಆಡಂಬೋಲ : ಬಿಸ್ನೆಸ್ ಕ್ಲಾಸಿನ ಕಾಮಧೇನು – HDK

2014ರಲ್ಲಿ ಫ಼ೋರ್ಬ್ಸ್ ತಯಾರಿಸಿದ ವಿಶ್ವದ 36 ಜನ ಅತಿ ಪ್ರಭಾವಿತ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಮುಖೇಶ್​ ಅಂಬಾನಿ ಸೇರಿದ್ದಾರೆ. 2013ರ ಮಟ್ಟಿಗೆ, ಅವರು ಭಾರತದ ಅತಿ ಹೆಚ್ಚು ಶ್ರೀಮಂತ ವ್ಯಕ್ತಿ ಮತ್ತು ಏಷ್ಯಾದಲ್ಲಿ ಎರಡನೇ ಅತಿ ಹೆಚ್ಚು ಶ್ರೀಮಂತ ವ್ಯಕ್ತಿ. ಅಂಬಾನಿ ಅವರ ವೈಯಕ್ತಿಕ ಸಂಪತ್ತು 23.6 ಬಿಲಿಯನ್ ಡಾಲರ್​. ವಿಶ್ವದ 19 ನೇ ಶ್ರೀಮಂತ ವ್ಯಕ್ತಿ ಎಂದು ಪಟ್ಟಿ ಮಾಡಲಾಗಿದೆ. ರಿಲಯನ್ಸ್ ಮೂಲಕ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಆದ ಮುಂಬಯಿ ಇಂಡಿಯನ್ಸ್ ತಂಡದ ಮಾಲಿಕರಾಗಿದ್ದಾರೆ. 2012 ರಲ್ಲಿ, ಫೋರ್ಬ್ಸ್ ಇವರನ್ನು ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಮಾಲೀಕರು ಎಂದು ನೇಮಿಸಿದೆ.

Share This Article
Leave a comment