ದೆಹಲಿಯ ಶುಕ್ರವಾರ ಸಂಜೆ ಮುಂಡ್ಕಾದಲ್ಲಿರುವ 4 ಅಂತಸ್ತಿನ ಕಮರ್ಷಿಯಲ್ ಬಿಲ್ಡಿಂಗ್ನಲ್ಲಿ ಬೆಂಕಿ ದುರಂತದಲ್ಲಿ ಘೋರ ದುರಂತದಲ್ಲಿ 27 ಜನರು ಸಾವನ್ನಪ್ಪಿ, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು 19 ನಾಪತ್ತೆಯಾಗಿದ್ದಾರೆ. ಅನೇಕರು ಕಟ್ಟಡದಿಂದ ಜಂಪ್ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಇದನ್ನು ಓದಿ : ದೆಹಲಿ ಅಗ್ನಿ ದುರಂತ :ಸಜೀವ ದಹನದ ಸಂಖ್ಯೆ 27 ಕ್ಕೆ ಏರಿಕೆ – 2 ಲಕ್ಷರು ಪರಿಹಾರ : ರಾಷ್ಟ್ರಪತಿ, ಪ್ರಧಾನಿಗಳಿಂದ ಸಂತಾಪ
ಈ ದುರ್ಘಟನೆ ಸಂದರ್ಭದಲ್ಲಿ ಕೆಲವರು ಬಿಲ್ಡಿಂಗ್ನ ಗ್ಲಾಸ್ಗಳನ್ನು ಒಡೆದು ಕಟ್ಟಡದಿಂದ ಜಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫ್ಯಾಕ್ಟರಿಗಳಿಂದ ನಿಯಮ ಉಲ್ಲಂಘನೆ ಬೆಂಕಿ ಅನಾಹುತ ಸಂಬಂಧ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಫ್ಯಾಕ್ಟರಿಯ ಇಬ್ಬರು ಮಾಲೀಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೂರನೇ ಮಾಲೀಕ ನಾಪತ್ತೆಯಾಗಿದ್ದಾನೆ.

ಈ ಕಟ್ಟಡದಲ್ಲಿ ಫ್ಯಾಕ್ಟರಿಗಳು ಮಾಡಿಕೊಂಡಿರುವ ವ್ಯವಸ್ಥೆಗಳು ನಿಯಮಗಳ ಪ್ರಕಾರ ಇರಲಿಲ್ಲ. ಫೈರ್ ಎನ್ಓಸಿ ಇಲ್ಲದೇ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಡೆಲ್ಲಿ ಫೈರ್ ಸರ್ವೀಸ್ ಮುಖ್ಯಸ್ಥ ಆರೋಪಿಸಿದ್ದಾರೆ.
ಇದನ್ನು ಓದಿ : ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಪರಾರಿಗೆ ಯತ್ನ: ಕಾಲಿಗೆ ಗುಂಡಿಟ್ಟ ಪೊಲೀಸರು
19 ಮಂದಿ ಕಾಣುತ್ತಿಲ್ಲ :
ಈ ದುರಂತದಲ್ಲ ಇನ್ನೂ 19 ಮಂದಿ ನಾಪತ್ತೆ ಆಗಿದ್ದಾರೆ. ಸ್ಥಳದಲ್ಲೇ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ. ಕಟ್ಟಡದ ಅವಶೇಷಗಳಡಿಯಲ್ಲಿ ಸುಟ್ಟು ಹೋಗಿರುವ ಅವಶೇಷಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ತಜ್ಞರು ಆಗಮಿಸಿ ಡಿಎನ್ಎ ಪರೀಕ್ಷೆ ಮಾಡುತ್ತಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ