ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಪರಾರಿಗೆ ಯತ್ನ: ಕಾಲಿಗೆ ಗುಂಡಿಟ್ಟ ಪೊಲೀಸರು

Team Newsnap
1 Min Read

ಬೆಂಗಳೂರಿನ ಸುಂಕದ ಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್​ ಎರಚಿ ಎಸ್ಕೇಪ್​ ಆಗಿದ್ದ ನಾಗೇಶ್​ ಪೋಲಿಸರು ಬಂಧಿಸಿದ ನಂತರ ಇತ್ತ ತಮಿಳುನಾಡಿನಿಂದ ಬೆಂಗಳೂರಿಗೆ ಕರೆ ತರುವ ವೇಳೆ ಎಸ್ಕೇಪ್​​ ಆಗಲು ಯತ್ನಿಸಿದ್ದ ಆರೋಪಿ ನಾಗೇಶ್ ಕಾಲಿಗೆ ಪೊಲೀಸರು ಗುಂಡಿಟ್ಟಿದ್ದಾರೆ.

ತಮಿಳುನಾಡಿನಿಂದ ಆರೋಪಿಯನ್ನು ಬೆಂಗಳೂರಿಗೆ ಕರೆತರುವ ಸಂದರ್ಭದಲ್ಲಿ ಆರೋಪಿ ಕೆಂಗೇರಿಯ ಮೇಲ್ಸೇತುವೆ ಬಳಿ ಮೂತ್ರ ವಿಸರ್ಜನೆಗೆ ಗಾಡಿ ನಿಲ್ಲಿಸುವಂತೆ ಮನವಿ ಮಾಡಿದ್ದ.

ಅವನ ಮನವಿ ಮೇರೆಗೆ ವಾಹನ ನಿಲ್ಲಿಸುತ್ತಿದ್ದಂತೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು​ ಯತ್ನಿಸಿದ್ದನಂತೆ. ಅಲ್ಲದೇ ಹಿಡಿಯಲು ಹೋದ ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ಇದನ್ನು ಓದಿ :ಮೇ 19ಕ್ಕೆ SSLC ಫಲಿತಾಂಶ ಪ್ರಕಟ

ಈ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿರುವ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಕಾನ್ಸ್​​ಟೇಬಲ್​ ಮಹಾದೇವಯ್ಯ ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಬೆಂಗಳೂರು ಪಶ್ಚಿಮ ಡಿಸಿಪಿ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು, ಪೊಲೀಸರು ಆರೋಪಿ ನಾಗೇಶನನ್ನು ನಗರಕ್ಕೆ ಕರೆತಂದಿದ್ದು, ಆತ ಕೃತ್ಯ ಎಸಗಲು ಅಸಲಿ ಕಾರಣವೇನು. ಬಳಿಕ ಊರು ಬಿಟ್ಟಿದ್ದೇಗೆ? ಆಶ್ರಮ ಸೇರಿದ್ಯಾಕೆ ಎಂಬ ಬಗ್ಗೆ ಪೊಲೀಸರು ವಿಚಾರಣೆ ಮಾಡಲಿದ್ದಾರೆ.

Share This Article
Leave a comment