ಮುಂಬೈನ ವಾಂಖೆಡಿ ಸ್ಟೇಡಿಯಂನಲ್ಲಿ RCB – DC ವಿರುದ್ದ ನಡೆದ ಹಣಾಹಣಿಯಲ್ಲಿ ಆರ್ ಸಿ ಬಿ ತಂಡ 16 ರನ್ ಗಳ ಜಯ ಸಾಧಿಸಿ ಗೆಲುವಿನ ನಗೆ ಬೀರಿದೆ
ಚೆನ್ನೈ ವಿರುದ್ದ ಹೀನಾಯ ಸೋತಿದ್ದ ಆರ್ ಸಿ ಬಿ ತಂಡ, ಡೆಲ್ಲಿ ಕ್ಯಾಪಿಟಲ್ ವಿರುದ್ದ ಒಗ್ಗಟ್ಟಿನ ಪ್ರದರ್ಶನ ನೀಡಿ 190 ರನ್ ಗಳ ಮೊತ್ತವನ್ನು ಪೇರಿಸಿ, ಈ ಬಾರಿ ಡೆಲ್ಲಿ ತಂಡಕ್ಕೆ ಕಠಿಣ ಸವಾಲು ನೀಡಿತು.
RCB ತಂಡ ಮೊದಲ 10 ಓವರ್ ಗಳಲ್ಲಿ ನಿರಾಶದಾಯಕ ರನ್ ಗಳನ್ನು ಗಳಿಸಿತು. ಮ್ಯಾಕ್ಸ್ ವೆಲ್ 55 ರನ್ ಹಾಗೂ ಬಿರುಸಿನ ಆಟ ಆಡಿದ ದಿನೇಶ್ ಕಾರ್ತಿಕ್ 66 ರನ್ ಹೊಡೆದು ತಂಡದ ಗೆಲುವಿಗೆ ಕಾರಣರಾದರು.
ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ , 66 ರನ್ ಬಾರಿಸಿದ ವಾರ್ನರ್ ಹಾಗೂ 36 ರನ್ ಹೊಡೆದ ರಿಷಬ್ ಪಂತ್ ಮಾತ್ರ ಭರವಸೆ ಮೂಡಿಸಿದರೂ ಗೆಲುವು ಸಾಧಿಸುವಲ್ಲಿ ವಿಫಲವಾಯಿತು
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿ ಡಿಸಿ ತಂಡ ತನ್ನ ಲೆಕ್ಕಚಾರದಲ್ಲಿ ಸಂಪೂರ್ಣ ಎಡವಿ ಹೋಯಿತು.
ಇದುವರೆಗೂ ಆರ್ ಸಿ ಬಿ ತಂಡ ಆಡಿದ 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 2 ಪಂದ್ಯಗಳನ್ನು ಸೋತಿದೆ.
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್
ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ