ಮಸೀದಿ ಚಿತ್ರದ ಮೇಲೆ ಭಗವಾಧ್ವಜ : ಹುಬ್ಬಳ್ಳಿ ಉದ್ವಿಗ್ನ : ಕಲ್ಲು ತೂರಾಟ – ಅಶ್ರುವಾಯು, ಗಾಳಿಯಲ್ಲಿ ಗುಂಡು

Team Newsnap
1 Min Read

ಹುಬ್ಬಳ್ಳಿ ತಡರಾತ್ರಿ ಉದ್ವಿಗ್ನವಾಗಿದೆ. ಮಸೀದಿ ಚಿತ್ರದ ಮೇಲೆ ಭಗವಾಧ್ವಜ ಹಾರಿಸಿದ ಎಡಿಟ್ ಮಾಡಿದ ಫೋಟೊ ಒಂದನ್ನು ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡ ವಿಡಿಯೋ ವೈರಲ್ ಆದ ಕಾರಣಕ್ಕಾಗಿ ಹಳೇ ಹುಬ್ಬಳ್ಳಿ ಉದ್ವಿಗ್ನವಾಯಿತು.

ಈ ಯುವಕ ಪ್ರಚೋದನಕಾರಿ ಪೋಸ್ಟ್ ಅನ್ನು ತನ್ನ ಸ್ಟೇಟಸ್ ಹಾಕಿಕೊಂಡ ನಂತರ ಹಳೇ ಹುಬ್ಬಳ್ಳಿ ಯಲ್ಲಿ ಗಲಭೆ ಆರಂಭವಾಯಿತು.

ಪೋಲಿಸ್ ಠಾಣೆ ಪಕ್ಕದಲ್ಲೇ ಕಲ್ಲು ತೂರಾಟ , ವಾಹನಗಳಿಗೆ ಬೆಂಕಿ ಹಚ್ಚುವ ಕೆಲಸವನ್ನು ಕಿಡಿಗೇಡಿಗಳು ಮಾಡಿದರು. ಸಮೀಪದ ಆಸ್ಪತ್ರೆಯ ಮೇಲೂ ದಾಳಿ ನಡೆದಾಗ ಪೋಲಿಸರು ಲಾಠಿ ಪ್ರಹಾರ , ಅಶ್ರುವಾಯು ಪ್ರಯೋಗ ಮಾಡಿದರು. ಆಗಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಹೋದಾಗ ಗಾಳಿ ಗುಂಡು ಹಾರಿಸಿದರು.

ಇಬ್ಬರು ಪೋಲಿಸರು ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ . ಪೋಲಿಸ್ ವಾಹನಗಳನ್ನು ಜಖಂ ಮಾಡಲಾಗಿದೆ. ಬೆಂಕಿ ಹಚ್ಚುವ ಪ್ರಯತ್ನವೂ ನಡೆದಿದೆ.

ಎಡಿಟ್ ಮಾಡಲಾದ ಮಸೀದಿ ಚಿತ್ರದ ಮೇಲೆ ನಾನು ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ. ಜೈ ಶ್ರೀರಾಮ್ ಹಿಂದೂ ಸಾಮ್ರಾಟ್ ಎಂದು ಬರೆದಿದ್ದ ಅಭಿಷೇಕ್ ಹಿರೇಮಠ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.

ಪೋಲಿಸ್ ಕಮೀಷನ್ ಲಾಭೂರಾಮ್ ಮುಸ್ಲಿಂ ಮುಖಂಡರ ಜೊತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಸ್ಥಳಕ್ಕೆ ಹೆಚ್ಚುವರಿ ಪೋಲಿಸರನ್ನು ಹಾಕಲಾಗಿದೆ. ಭದ್ರಾವತಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದೆ. ಭಾನುವಾರ ರಜೆ ಪಡೆದುಕೊಂಡ ಎಲ್ಲಾ ಪೋಲಿಸು ಕರ್ತವ್ಯ ಹಾಜರಾಗುವಂತೆ ಸೂಚಿಸಲಾಗಿದೆ.

Share This Article
Leave a comment