July 7, 2022

Newsnap Kannada

The World at your finger tips!

WhatsApp Image 2022 06 11 at 4.37.18 PM

ಪ್ರೀತಿಸಿದ ಹುಡುಗನೇ ಮುಖ್ಯ: ತಾಯಿಗೆ ಚಾಕುವಿನಿಂದ ಇರಿದು ಮಗಳು , ಪ್ರಿಯಕರ ಪರಾರಿ

Spread the love

ತಾನು ಪ್ರೀತಿಸಿದ ಹುಡುಗನಿಗಾಗಿ ತಾಯಿಗೆ ಚಾಕುವಿನಿಂದ ಇರಿದು ಮಗಳು ಪರಾರಿಯಾಗಿರುವ ಘಟನೆ ಧಾರವಾಡದಲ್ಲಿ ಜರುಗಿದೆ, ಬಾಲಕ ಹಾಗೂ ಬಾಲಕಿ ಒಬ್ಬರಿಗೊಬ್ಬರು ಪರಸ್ಪರವಾಗಿ ಪ್ರೀತಿಸುತ್ತಿದ್ದರು. ಕಳೆದ ವರ್ಷ ಬಾಲಕಿ ಪ್ರೀತಿ ವಿಚಾರವಾಗಿ ದೂರು ದಾಖಲಾಗಿದ್ದ ಪರಿಣಾಮ ಆತ ಜೈಲಿಗೆ ಹೋಗಿದ್ದ.

ಅಪ್ರಾಪ್ತೆ ಕೂಡಾ ಸಾಂತ್ವನ ಕೇಂದ್ರದಲ್ಲಿದ್ದು ಬಳಿಕ ವಾಪಸ್ ಆಗಿದ್ದಳು. ಈ ನಡುವೆ ಪೋಕ್ಸೋ ಕಾಯ್ದೆ ಅರೆಸ್ಟ್​ ಆಗಿದ್ದ ಆತ ಜಾಮೀನು ಪಡೆದು ಹೊರಗಡೆ ಬಂದಿದ್ದ.

ಒಬ್ಬಳೇ ಹೆಣ್ಣು ಮಗಳನ್ನು ತಾಯಿ ಜೀಜಾಬಾಯಿ ಸಲಹಿದ್ದಳು. ಹಲವು ದಿನಗಳಿಂದ ಅಪ್ರಾಪ್ತ ಮಗಳು ಓರ್ವ ಯುವಕನ ಜೊತೆ ಸುತ್ತಾಡುತ್ತಿದ್ದನ್ನು ಕಂಡು ಆತನ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮಕ್ಕೆ  ಮುಂದಾಗಿದ್ದಳು.

ಮೊನ್ನೆ ಮೊನ್ನೆ ಅಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆತ ನಿನ್ನೆ ರಾತ್ರಿ ದಿಢೀರ್ ಎಂದು ಧಾರವಾಡದ ಯುವತಿಯ ಮನೆಯಲ್ಲಿ ಪ್ರತ್ಯಕ್ಷನಾಗಿ, ಯುವತಿಯ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿಮತ್ತೆ ಬಿಜೆಪಿಗೆ ಸೇರ್ಪಡೆಯಾಗಲು ಎಲ್ ಆರ್ ಶಿವರಾಮೇಗೌಡ ಸಿದ್ದತೆ ?

ಈ ಘಟನೆ ಬಳಿಕ ಮನೆಯಿಂದ ಬಾಲಕಿ ಕೂಡ ಪರಾರಿಯಾಗಿದ್ದಾಳೆ ಇವರಿಬ್ಬರಿಗಾಗಿ ಧಾರವಾಡ ಉಪ ನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿಯ ಕೃತ್ಯಕ್ಕೆ ಅಪ್ರಾಪ್ತೆಯೂ ಸಹ ಸಾಥ್ ನೀಡಿರುವ ಸಂಶಯವಿದೆ.

error: Content is protected !!