July 6, 2022

Newsnap Kannada

The World at your finger tips!

shivaramegowda

ಮತ್ತೆ ಬಿಜೆಪಿಗೆ ಸೇರ್ಪಡೆಯಾಗಲು ಎಲ್ ಆರ್ ಶಿವರಾಮೇಗೌಡ ಸಿದ್ದತೆ ?

Spread the love

ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಮುಂದಿನ ರಾಜಕಾರಣ ಹಾದಿಯನ್ನು ಮತ್ತೆ ಬಿಜೆಪಿಯಿಂದಲೇ ಅರಂಭಿಸಲು ನಿರ್ಧರಿಸಿದ್ದಾಯೇ? ಶಿವರಾಮೇಗೌಡಉಚ್ಚಾಟನೆಗೊಂಡ ಬಳಿಕ ಮುಂದಿನ ಚುನಾವಣೆಯಲ್ಲಿ ಪಕ್ಷೇತವಾಗಿ‌ ಸ್ಪರ್ಧೆಗೆ ನಿರ್ಧಾರ ಮಾಡಿ ಪ್ರಕಟನೆಯನ್ನೂ ಮಾಡಿದ್ದರು.

ಆದರೆ ಬದಲಾದ ಮನಸ್ಥಿತಿ ಹಾಗೂ ಲೆಕ್ಕಾಚಾರದಂತೆ ಇದೀಗ ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಮೇಗೌಡರು ಬಿಜೆಪಿಯತ್ತ ಮನಸ್ಸು ಬದಲಾಯಿಸುವ ಹಂತಕ್ಕೆ ಬಂದಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ನಾಗಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ರವಿಶಂಕರ್ ಪರ ಮತಯಾಚನೆ ಮಾಡುತ್ತಿದ್ದಾರೆ.

ಪದವೀಧರ ಕ್ಷೇತ್ರ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡುವುದಕ್ಕೆ ಸಚಿವರಾದ ನಾರಾಯಣಗೌಡ ಮತ್ತು ಗೋಪಾಲಯ್ಯ ಜೊತೆ ಸಾಕ್ಷಿಯೂ ಆಗಿದ್ದಾರೆ,ಮುಂದಿನ‌ ವಿಧಾನ ಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಶಿವರಾಮೇಗೌಡ ಲೆಕ್ಕಾಚಾರ ಹಾಕಿದ್ದಾರೆಂದು ಹೇಳಲಾಗಿದೆ.

ಇದನ್ನು ಓದಿ – ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ – ಸುಳಿವು ನೀಡಿದ ಸಚಿವ ಅಶ್ವಥ್ ನಾರಾಯಣ್

ಈ‌ ಹಿಂದೆ 2009ರಲ್ಲಿ ಬಿಜೆಪಿಯಿಂದ ಮಂಡ್ಯದಿಂದ ಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಶಿವರಾಮೇಗೌಡರು ಬಳಿಕ‌ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋಗಿದ್ದರು, ಇದೀಗ ಮತ್ತೆ ಬಿಜೆಪಿಗೆ ಮರಳಲು ಶಿವರಾಮೇಗೌಡರು ಸಿದ್ಧತೆ ನಡೆಸಿದ್ದಾರೆ. ರಾಜಕಾರಣ ಎನ್ನುವುದು ನಿಂತ ನೀರಲ್ಲ ಎನ್ನುವ ಮಾತು ಶಿವರಾಮೇಗೌಡರ ನಡೆ ಸಾಕ್ಷಿಯಾಗಿದೆ.

error: Content is protected !!