December 21, 2024

Newsnap Kannada

The World at your finger tips!

b07f5984 963d 496f 8822 fd3d77e4f2ff

ಪಕ್ಷಕ್ಕಿಂತ ನನಗೆ ವ್ಯಕ್ತಿ ಮುಖ್ಯ: ಮುನಿರತ್ನ ಪರ ನಟ ದರ್ಶನ್ ಪ್ರಚಾರ

Spread the love

ಆರ್​ಆರ್​ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಪರವಾಗಿ ಇಂದು ಚುನಾವಣಾ ಪ್ರಚಾರ ನಡೆಸಿದರು.

ಮುನಿರತ್ನ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಅವರ ಪರ ಪ್ರಚಾರ ಮಾಡಿದ್ದೇನೆ. ಕೊರೋನಾ ಸಮಯದಲ್ಲಿ ಮುನಿರತ್ನ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿದ್ದೇನೆ. ಸಾವಿರಾರು ಬಡ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಕೆಲಸಗಳನ್ನು ನೋಡಿಯೇ ನಾನಿಂದು ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಈ ವೇಳೆ ನಟ ದರ್ಶನ್​ ಹೇಳಿದ್ದಾರೆ.

ನಾನು ಯಾವುದೇ ಪಕ್ಷವನ್ನು ನೋಡಿ ಪ್ರಚಾರ ಮಾಡುವುದಿಲ್ಲ. ವ್ಯಕ್ತಿಯನ್ನು ನೋಡಿ ಪ್ರಚಾರ ಮಾಡುತ್ತಿದ್ದೇನೆ.  ಕೊರೋನಾ ಲಾಕ್​ಡೌನ್ ಸಮಯದಲ್ಲಿ ಬಡವರು, ಶ್ರೀಮಂತರು ಅನ್ನದೆ ಎಲ್ಲರೂ ಸಂಕಷ್ಟದಲ್ಲಿದ್ದರು. ಅಂಥವರಿಗೆ ಮುನಿರತ್ನ ಸಹಾಯಹಸ್ತ ನೀಡಿದ್ದರು. ನಾನೂ ಊಟಕ್ಕೆ, ಹಾಲು ಸಿಗದೆ ಸಮಸ್ಯೆ ಎದುರಿಸಿದ್ದೆ. ಆರ್​ಆರ್​ ನಗರದಲ್ಲಿ ಉತ್ತಮ ರಸ್ತೆಗಳಾಗಿವೆ, ಅಭಿವೃದ್ಧಿ ಕೆಲಸಗಳು ಆಗಿವೆ. ಅದನ್ನು ಗಮನದಲ್ಲಿಟ್ಟುಕೊಂಡು ನಾನು ಮುನಿರತ್ನ ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದೇನೆ ಎಂದು ದರ್ಶನ್​ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!