December 2, 2021

Newsnap Kannada

The World at your finger tips!

ರಜಿನಿಕಾಂತ್​​ಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ: ಕನ್ನಡಿಗ ಸ್ನೇಹಿತನ ನೆನಪಿಸಿಕೊಂಡ ರಜನಿ

Spread the love

ನವದೆಹಲಿ: ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸೂಪರ್​ ಸ್ಟಾರ್​​ ರಜಿನಿಕಾಂತ್​ ಅವರಿಗೆ ನೀಡಿ ಗೌರವಿಸಲಾಗಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 67ನೇ ನ್ಯಾಷನಲ್ ಫಿಲ್ಮ್ ಅವಾರ್ಡ್​ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಜಿನಿಗೆ ದಾದಾ ಸಾಹೇಬ್ ಪಾಲಿಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ರಜಿನಿಕಾಂತ್, ಈ ಪ್ರಶಸ್ತಿಯನ್ನು ನನ್ನ ಗುರುಗಳಾದ ಕೆ.ಬಾಲಚಂದರ್ ಅವರಿಗೆ ಅರ್ಪಿಸುತ್ತೇನೆ. ಅಲ್ಲದೇ ಈ ವೇಳೆ ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ಬೆಳೆಸಿದ, ಆಧ್ಯಾತ್ಮದಲ್ಲಿ ಆಸಕ್ತಿ ಮೂಡಿಸಿದ ನನ್ನ ಅಣ್ಣ ಸತ್ಯನಾರಾಯಣ್ ಗಾಯಕ್​ವಾಡ್ ಹಾಗೂ ಕರ್ನಾಟಕದ ನನ್ನ ಸ್ನೇಹಿತ ಮತ್ತು ಬಸ್ ಚಾಲಕ ರಾಜ್ ಬಹದ್ದೂರ್​ಗೆ ಅರ್ಪಿಸುತ್ತೇನೆ ಎಂದರು

ಅವರು ನನ್ನ ಪ್ರತಿಭೆಯನ್ನು ಗುರುತಿಸಿದ ಮೊದಲ ವ್ಯಕ್ತಿ. ಆರಂಭದಲ್ಲಿ ಅವರು ನನ್ನನ್ನು ಪ್ರೋತ್ಸಾಹಿಸಿದರು ಎಂದು ಹೇಳಿದ್ದಾರೆ. ವಿಶೇಷವೆಂದರ ತಮ್ಮ ಭಾಷಣದಲ್ಲಿ ಕೇವಲ ಈ ಮೂವರ ಹೆಸರು ಮಾತ್ರ ಹೇಳಿದ ರಜಿನಿಕಾಂತ್, ತಮಿಳುಜನರಿಗೂ ಧನ್ಯವಾದ ಅರ್ಪಿಸಿದ್ದಾರೆ.

error: Content is protected !!