2022 ರ ಐಪಿಎಲ್ ಸೀಸನ್ ಗೆ 2 ಹೊಸ ತಂಡಗಳ ಘೋಷಣೆ

Team Newsnap
1 Min Read
IPL media rights for the year 2023-2027 sold for Rs 43,050 crore

ಮುಂದಿನ ಐಪಿಎಲ್ ಸೀಸನ್ ಗೆ ಎರಡು ಹೊಸ ತಂಡಗಳ ಘೋಷಣೆಯಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್​ 2022 ರಲ್ಲಿ10 ತಂಡಗಳು ಕಣಕ್ಕಿಳಿಯಲಿದೆ.

ಈಗಿರುವ 8 ತಂಡಗಳೊಂದಿಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿದೆ. ಈ ಎರಡು ಹೊಸ ತಂಡಗಳನ್ನುಆರ್​ಪಿ ಸಂಜಯ್ ಗೊಯೇಂಕಾ ಹಾಗೂ ಸಿವಿಸಿ ಕ್ಯಾಪಿಟಲ್ಸ್ ಕಂಪೆನಿ ಖರೀದಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅಹಮದಾಬಾದ್ ಮತ್ತು ಲಕ್ನೋ ಎರಡು ಹೊಸ ತಂಡಗಳಾಗಿವೆ.

ಸಿವಿಸಿ ಕ್ಯಾಪಿಟಲ್ ಪಾರ್ಟ್ನರ್ಸ್ ಅಹಮದಾಬಾದ್ ಪಡೆದರೆ, ಆರ್ ಪಿಎಸ್ ಜಿ ಗ್ರೂಪ್ ಲಕ್ನೋ ತಂಡ ಪಡೆದಿದೆ.

ಅಂತಿಮವಾಗಿ ಆರ್​ಪಿ ಸಂಜೀವ್ ಗೊಯೇಂಕಾ ಆರ್​ಪಿಎಸ್​ಜಿ ಗ್ರೂಪ್ 7 ಸಾವಿರ ಕೋಟಿಗೆ ಮೊದಲ ತಂಡವನ್ನು ಖರೀದಿಸಿತು.

2ನೇ ತಂಡವನ್ನು ಸಿವಿಸಿ ಕ್ಯಾಪಿಟಲ್ಸ್ ಪ್ರೈವೇಟ್ ಇಕ್ಯುಟಿ ಕಂಪೆನಿ 5,200 ಕೋಟಿಗೆ ಪಡೆದುಕೊಂಡಿದೆ.

ಸಂಜೀವ್ ಗೊಯೇಂಕಾ ಈ ಹಿಂದೆ ರೈಸಿಂಗ್ ಪುಣೆ ಜೈಂಟ್ಸ್​ ತಂಡದ ಮಾಲೀಕರಾಗಿದ್ದರು. ಇದೀಗ ಮತ್ತೊಮ್ಮೆ ಐಪಿಎಲ್​ ತಂಡವನ್ನು ಖರೀದಿಸಿದ್ದಾರೆ.

TAGGED: ,
Share This Article
Leave a comment