December 24, 2024

Newsnap Kannada

The World at your finger tips!

darshan

ನಟ ಜಗ್ಗೇಶ್ ಅವರಲ್ಲಿ ‘ ಸಾರಿ’ ಎಂದು ಡಿ ಬಾಸ್ ದರ್ಶನ್ – ವಿವಾದ ಅಂತ್ಯ

Spread the love

ನಟ ಜಗ್ಗೇಶ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರಿ ಎಂದು ಕೇಳಿದ್ದಾರೆ.

ಸೆಲೆಬ್ರಿಟಿಗಳ(ಅಭಿಮಾನಿಗಳ) ಪರವಾಗಿ ನಾನು ಸಾರಿ ಕೇಳುತ್ತೇನೆ. ಜಗ್ಗೇಶ್ ಅವರು ಸೀನಿಯರ್. ಅವರೇ ಮುಂದೆ. ನಾವು ಅವರ ಹಿಂದೆ ಇರುತ್ತೇವೆ. ಅವರು ಏನೇ ಮಾತಾಡಿದರೂ ನಮ್ಮ ಬಗ್ಗೆ ತಾನೇ ಮಾತಾಡಿದ್ದಾರೆ ಎಂದು ದರ್ಶನ್ ದೊಡ್ಡಗುಣ ತೋರಿಸಿದ್ದಾರೆ.

ಈ ಮೂಲಕ ವಿವಾದಕ್ಕೆ ತೆರೆ ಎಳೆದ ದರ್ಶನ್ ದೊಡ್ಡತನ ಮೆರೆದಿದ್ದಾರೆ.
ನಿರ್ಮಾಪಕರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಜಗ್ಗೇಶ್ ಅವರು ದರ್ಶನ್ ಕುರಿತಾಗಿ ಆಡಿದ ಮಾತು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಜಗ್ಗೇಶ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಜಗ್ಗೇಶ್ ಕೂಡ ನಂತರದಲ್ಲಿ ಅಸಮಾಧಾನ ಹೊರ ಹಾಕಿದ್ದರು.

ಈ ಬಗ್ಗೆ ದರ್ಶನ್ ಅವರಿಗೆ ಏನೇನೂ ಗೊತ್ತಿರಲಿಲ್ಲ. ಘಟನೆ ತಮ್ಮ ಗಮನಕ್ಕೆ ಬರುತ್ತಲೇ ದರ್ಶನ್ ಜಗ್ಗೇಶ್ ಅವರಿಗೆ ಸಾರಿ ಕೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!