January 5, 2025

Newsnap Kannada

The World at your finger tips!

656f34e6 79f6 48de 85f8 4b4c7c355aaf

ಡಿ. 31ರ ರಾತ್ರಿ ಕಂಪನಿ ಕೊಡು ಎಂದು ನಟಿ ಚಿತ್ರಾ ಗೆ ಆಫರ್ ಕೊಟ್ಟಿದ್ಯಾರು?

Spread the love
  • ನಿಗೂಢವಾಗುತ್ತಿರುವ ನಟಿ ಚಿತ್ರಾ ಆತ್ಮಹತ್ಯೆ ಕಾರಣಗಳು….
  • ಡಿ 31 ರ ರಾತ್ರಿ ಹೊಸ ವರ್ಷಾಚರಣೆಯ ರಾತ್ರಿ ನನ್ನೊಂದಿಗೆ ಕಾಲ ಕಳೆಯಬೇಕು ಎಂದು ಒತ್ತಾಯಿಸಿದ ಆ ರಾಜಕಾರಣಿ ಯಾರು?

ತಮಿಳು ಕಿರುತೆರೆ ನಟಿ ವಿಜಿ ಚಿತ್ರಾಳ‌ ಆತ್ಮಹತ್ಯೆ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಮದ್ಯ ವ್ಯಸನಿ ಗಂಡನೊಂದಿಗೆ….

ಮದ್ಯವ್ಯಸನಿಯಾಗಿರುವ ಗಂಡ ಹೇಮಂತ್ ನಡವಳಿಕೆ ಸರಿ ಇರಲಿಲ್ಲ. ತಮಿಳುನಾಡಿನ ಓರ್ವ ಮಂತ್ರಿ ಹಾಗೂ ಶಾಸಕರು ಕೂಡ ಆಕೆಯ ಸ್ನೇಹ ಬಯಸಿದ್ದರು ಎಂಬ ಸಂಗತಿಗಳು ಬಯಲಾಗಿದೆ.

ಈ ನಡುವೆ ಮಂತ್ರಿಯೊಬ್ಬರು ಚಿತ್ರಾ ತಂಗಿದ್ದ ಹೋಟೆಲ್ ಗೆ ಬಂದು ಹೋಗಿದ್ದರಂತೆ. ಅದೇ ರೀತಿ ಶಾಸಕರೊಬ್ಬರು ಅ 21 ರಂದು ಪೆರಂಬೂರುನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರಾ ಪಾಲ್ಗೊಂಡಿದ್ದರು. ಅದೇ ದಿನ ಶಾಸಕ ಕೂಡ ಅಲ್ಲಿಗೆ ಬಂದಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ವರ್ಷಾಚರಣೆಗೆ ಕರೆದವರು ಯಾರು? :

ರಾಜಕಾರಣಿಯೊಬ್ಬ ಚಿತ್ರಾಳೊಂದಿಗೆ ಅನೇಕ ಬಾರಿ ದೂರವಾಣಿ ಕರೆ ಮಾಡಿ ಮಾತನಾಡಿ ಡಿ 31 ರಂದು ರಾತ್ರಿ ಹೊಸ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಕಾಲ ಕಳೆಯಬೇಕು ಎಂದು ಬೇಡಿಕೆ ಇಟ್ಟಿದ್ದನಂತೆ. ಆ ರಾಜಕಾರಣಿ ಯಾರು ಎಂಬುದು ಇನ್ನೂ ನಿಗೂಢ ವಾಗಿದೆ. ಇಂತಹ ಎಲ್ಲಾ ಸನ್ನಿವೇಶ ಗಳನ್ನು ಎದುರಿಸಲು ಸಾಧ್ಯವಾಗದ ಚಿತ್ರಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು ಎಂದು ಪೋಲಿಸರು ತಿಳಿಸಿದ್ದಾರೆ.

ಈ ಎಲ್ಲಾ ಕಾರಣಗಳೂ ಕೂಡ ಕಿರುತೆರೆ ಕಲಾವಿದೆ ಹಾಗೂ ವಿಡಿಯೋ ಜಾಕಿ ಚಿತ್ರಾ ದಿಢೀರ್​ ಸಾವಿಗೆ ಅನುಮಾನಗಳ ಹುತ್ತ ಕಟ್ಟುವಂತೆ ಮಾಡಿವೆ.

ಚಿತ್ರಾರ ಶವಪರೀಕ್ಷೆಯಲ್ಲಿ ಆತ್ಮಹತ್ಯೆ ಎಂಬುದು ಖಚಿತವಾಗಿದೆ. ಗಂಡ ಹೇಮಂತ್​ ನಡತೆಯ ಮೇಲೆ ಚಿತ್ರಾರ ತಾಯಿಗೆ ಅನುಮಾನ ಬಂದಾಗಿನಿಂದ ಆತನಿಂದ ದೂರವಾಗವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಚಿತ್ರಾ ಒತ್ತಡಕ್ಕೆ ಸಿಲುಕಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.

ಮದ್ಯ ವ್ಯಸನಿಯಾಗಿದ್ದ ಹೇಮಂತ್​, ಚಿತ್ರಾ ವಿಚಾರದಲ್ಲಿ ಅತಿಯಾದ ಪೊಸೆಸಿವ್​ನೆಸ್​ ಇತ್ತಂತೆ.

ಸೀರಿಯಲ್​ಗಳಲ್ಲಿ ರೊಮ್ಯಾಂಟಿಕ್​ ದೃಶ್ಯದಲ್ಲಿ ನಟನೆ ಮಾಡಿದರೆ ಶೂಟಿಂಗ್​ ಸೆಟ್​ನಲ್ಲಿ ಚಿತ್ರಾಳನ್ನು ಬೈಯುತ್ತಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.

ಇದೀಗ ಮತ್ತೊಂದು ವರದಿಯ ಪ್ರಕಾರ ರಾಜಕಾರಣಿಯೊಬ್ಬ ಚಿತ್ರಾರಿಗೆ ಕಿರುಕುಳ ನೀಡುತ್ತಿದ್ದರಂತೆ. ಅಲ್ಲದೆ, ಅನೇಕ ಬಾರಿ ಮೊಬೈಲ್​ ಕರೆ ಸಹ ಮಾಡಿದ್ದಾರೆಂದು ವರದಿಯಲ್ಲಿ ಉಲ್ಲೇಖವಾಗಿದೆ.

ಒಟ್ಟಾರೆ ಯುವ ನಟಿ ಚಿತ್ರಾಳ ಆತ್ಮಹತ್ಯೆ ಹಿಂದಿನ ಸತ್ಯವನ್ನು ಹೊರ ತರಬೇಕಿದೆ.

Copyright © All rights reserved Newsnap | Newsever by AF themes.
error: Content is protected !!