ನಾಳೆಯಿಂದ ಮೊಸರು, ಮಜ್ಜಿಗೆ, ಲಸ್ಸಿ ಉತ್ಪನ್ನಗಳ ಬೆಲೆ ಹೆಚ್ಚಳ

Team Newsnap
1 Min Read
KMF has reduced the price of Nandini products by Rs 1ನಂದಿನಿ ಉತ್ಪನ್ನಗಳ ದರ 1 ರುಗೆ ಇಳಿಕೆ ಮಾಡಿದ KMF #Thenewsnap #KMF #Dairy_products #latestnews #India #karnataka #bengaluru #Mandya_News #mysuru

ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್​ಟಿ ತೆರಿಗೆ ದರ ಹೆಚ್ಚಿಸಿರುವ ಜಿಎಸ್​ಟಿ ಮಂಡಳಿಯ ನಿರ್ಧಾರ ನಾಳೆಯಿಂದ ಜಾರಿ ಬರಲಿದೆ.

WhatsApp Image 2022 07 17 at 3.29.15 PM

ಜಿಎಸ್​ಟಿ ಮಂಡಳಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ.5 ರಷ್ಟು ಜಿಎಸ್​ಟಿ ವಿಧಿಸಿರುವ ಕಾರಣ ನಾಳೆಯಿಂದ ಹೊಸ ದರದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಆಗಲಿದೆ.ಇದನ್ನು ಓದಿ –ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ, ವಾಟ್ಸಪ್ ಮೆಸೇಜ್; ಹಣಕ್ಕೆ ಕಿಡಿಗೇಡಿಗಳಿಂದ ಬೇಡಿಕೆ

ಈಗಿರುವ ಬೆಲೆಯಿಂದ 1 ರಿಂದ 3 ರೂಪಾಯಿವರೆಗೆ ಬೆಲೆ ಏರಿಕೆ ಆಗಲಿದೆ, ಹಾಲಿನ ದರದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗುವುದಿಲ್ಲ. ಉಳಿದಂತೆ, 43 ರೂಪಾಯಿ ಇದ್ದ ಒಂದು ಲೀಟರ್​ ಮೊಸರಿನ ಬೆಲೆ 46 ರೂಪಾಯಿ ಆಗಲಿದೆ, ಅರ್ಧ ಲೀಟರ್ ಮೊಸರಿಗೆ 22 ರು ಅದು ಈಗ 24 ರೂಪಾಯಿ ಹೇರಿಕೆ ಆಗಲಿದೆ. 200 ಎಂಎಲ್​​ ಪ್ಯಾಕೆಟ್​ ಬೆಲೆ ಮೇಲೆ 1 ರೂಪಾಯಿ ಹೆಚ್ಚಳವಾಗಲಿದೆ.

ಜಿಎಸ್​ಟಿ ಕೌನ್ಸಿಲ್​ ಇತ್ತೀಚೆಗೆ ನಡೆಸಿದ 47ನೇ ಸಭೆಯಲ್ಲಿ ಪ್ಯಾಕೇಜ್​ ಮಾಡಿದ ಡೈರಿ ಉತ್ನನ್ನಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆದು, ಶೇ.5ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿತ್ತು. ಜಿಎಸ್​ಟಿ ಮಂಡಳಿಯ ಈ ನಿರ್ಧಾರ ಈಗಾಗಲೇ ಹೈನುಗಾರಿಕೆ ವೆಚ್ಚ ನಿಭಾಯಿಸಲು ಹೆಣಗಾಡುತ್ತಿದ್ದ ಹೈನುಗಾರಿಕೆ ಕ್ಷೇತ್ರದ ಮೇಲೆ ತೀವ್ರ ಪ್ರಭಾವ ಬೀರುವ ಸಾಧ್ಯತೆ ಇದೆ.

Share This Article
Leave a comment