ಒಂದೆಡೆ ಜಮೀನಿನಲ್ಲಿ ಬಿದ್ದಿರುವ ತೆಂಗಿನ ಗಿಡಗಳು . ಮತ್ತೊಂದೆಡೆ ಕಿತ್ತೆಸೆದಿರುವ ಟೊಮೆಟೋ ಸಸಿಗಳು.. ಇನ್ನೊಂದು ಕಡೆ ಕಣ್ಣೀರು ಹಾಕಿ ಗೋಳಾಡುತ್ತಿರುವ ರೈತರು..
ಇದನ್ನು ಓದಿ –ಚಿತ್ರನಟ ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
- ಈ ಮನಕಲಕುವ ದೃಶ್ಯಗಳು ಕಂಡುಬಂದಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎ ಶ್ಯಾನುಬೋಗನಹಳ್ಳಿಯಲ್ಲಿ. ವೈಯಕ್ತಿಕ ದ್ವೇಷದಿಂದಾಗಿ
ಬೆಳೆ ನಾಶ ಮಾಡಿಕೊಂಡ ಎ ಶ್ಯಾನುಬೋಗನಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್ ಕುಟುಂಬ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ.
1 ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು. ಆದರೀಗ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯನ್ನು ನಾಶ ಮಾಡಿದ್ದು, ರೈತ ಕುಟುಂಬದ ಜೀವನ ಅತಂತ್ರವಾಗಿದ್ದು, ನ್ಯಾಯ ಕೊಡಿಸಿ ಎಂದು ಅಂಗಾಲಾಚಿದ್ದಾರೆ.
ಕುಟುಂಬಕ್ಕೂ ಬಹಿಷ್ಕಾರ :
ಈ ಜಮೀನಿನ ಮೇಲೆ ಕಣ್ಣು ಹಾಕಿದ್ದ ಗ್ರಾಮದ ಕೆಲವರು ಈ ವಿಚಾರವಾಗಿ ತಗಾದೆ ತೆಗೆದು ಜಮೀನು ಬಿಟ್ಟು ಕೊಡವಂತೆ ಕೇಳಿದ್ದರು. ಈ ವಿಚಾರದಲ್ಲಿ ಗ್ರಾಮದಲ್ಲಿ ಕೆಲವು ಬಾರಿ ಗಲಾಟೆ ಕೂಡ ನಡೆದು ರಾಜಿ ಪಂಚಾಯಿತಿ ಕೂಡ ಆಗಿತ್ತು. ಜಮೀನು ಬಿಟ್ಟು ಕೊಡಲು ಒಪ್ಪದಿದ್ದ ಈ ಕುಟುಂಬವನ್ನು ಹೇಗಾದರೂ ಮಾಡಿ ಗ್ರಾಮದಿಂದ ಓಡಿಸಿ ಈ ಜಮೀನು ಕಬಳಿಸಬೇಕೆಂದು ನಿರ್ಧರಿಸಿದ ಕೆಲವರು ಈ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿಸಿದ್ದಾರೆ.
ಬಹಿಷ್ಕಾರದ ಬಳಿಕ ಸೋಮವಾರ ರಾತ್ರಿ ಆ ರೈತ ಕುಟುಂಬ ವ್ಯವಸಾಯ ಮಾಡ್ತಿದ್ದ ಜಮೀನಿನಲ್ಲಿ ಬೆಳೆದಿದ್ದ 70 ತೆಂಗಿನ ಸಸಿಗಳು ಸೇರಿ 7 ಸಾವಿರ ಟೊಮೆಟೋ ಸಸಿಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಕಿಡಿಗೇಡಿಗಳ ದುಷ್ಕೃತ್ಯಕ್ಕೆ ರೈತ ಕುಟುಂಬ ಹಿಡಿಶಾಪ ಹಾಕುತ್ತಿದೆ.
ಈ ಘಟನೆ ಸಂಬಂಧ ನೊಂದ ರೈತ ಕುಟುಂಬ ನಾಗಮಂಗಲ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದೆ. ತಾಲೂಕು ಆಡಳಿತ ಸೇರಿ ಸ್ಥಳೀಯ ಶಾಸಕರಿಗೂ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ