ಟ್ರಕ್​-ಬಸ್​ ನಡುವೆ ಅಪಘಾತ: 37 ಮಂದಿಯ ಭೀಕರ ಸಾವು

Team Newsnap
0 Min Read

ಭಾರೀ ಅಪಘಾತದಲ್ಲಿ ಸುಮಾರು 37 ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬ್ರೆಜಿಲ್​ನಲ್ಲಿ ಸಂಭವಿಸಿದೆ.

ಅಪಘಾತದ ಭೀಕರತೆಗೆ ಸಾಕ್ಷಿ ಎಂಬಂತೆ ಮೃತ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ.

ಬ್ರೆಜಿಲ್​ನ ಸಾವೋಪೋಲೋ ರಾಜ್ಯದ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಜವಳಿ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್​ ಹಾಗೂ ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅನಾಹುತ ಜರುಗಿದೆ. 37 ಮಂದಿ ಮೃತಪಟ್ಟರೆ, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನುಜ್ಜುಗುಜ್ಜಾಗಿರು ವಾಹನಗಳ ಮಧ್ಯೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ರಕ್ಷಕರು ಹರಸಾಹಸಪಡಬೇಕಾಯಿತು.

TAGGED:
Share This Article
Leave a comment