December 19, 2024

Newsnap Kannada

The World at your finger tips!

WhatsApp Image 2021 11 15 at 12.58.01 PM

ನಾಗಚೈತನ್ಯ ಸಿನಿಮಾ ಶೂಟಿಂಗ್​ ವೇಳೆ ಅವಘಡ : ಮೇಲುಕೋಟೆಯ ಕಲ್ಯಾಣಿಯಲ್ಲಿ ಸಿಲುಕಿಕೊಂಡ ಕ್ರೇನ್

Spread the love

ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ತೆಲುಗು ನಟ ನಾಗಚೈತನ್ಯ ನಟನೆಯ ಸಿನಿಮಾ ಚಿತ್ರಿಕರಣದ ವೇಳೆ ಕ್ರೇನ್​ ಕಲ್ಯಾಣಿಯಲ್ಲಿ ಸಿಲುಕಿದೆ

ಇದರಿಂದ ಕಲ್ಯಾಣಿಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಇತ್ತೀಚಿಗೆ ತಮಿಳು ಬಂಗಾರರಾಜು-2 ಸಿನಿಮಾದ ಸಿನಿಮಾ ಚಿತ್ರಿಕರಣದ ವೇಳೆ ಇಂತಹದ್ದೇ ಯಡವಟ್ಟು ಸಂಭವಿಸಿತ್ತು

ಈ ಬೆನ್ನಲ್ಲೇ ಇದೀಗ ತೆಲುಗು ಸ್ಟಾರ್​ ನಟ ನಾಗಚೈತನ್ಯ ಅಭಿನಯದ ಸಿನಿಮಾ ಚಿತ್ರಿಕರಣದ ವೇಳೆ ಕಲ್ಯಾಣಿಯಲ್ಲಿ ಕ್ರೇನ್​ ಸಿಲುಕಿಕೊಂಡು ಅವಾಂತರ ಸೃಷ್ಟಿಸಿದೆ.

ಜಿಲ್ಲೆಯ ಮೇಲುಕೋಟೆಯಲ್ಲಿ
ಅನುಮತಿ ಪಡೆಯದೇ ನಿಯಮಗಳನ್ನು ಉಲ್ಲಂಘಿಸಿ ಕಲ್ಯಾಣಿಯಲ್ಲಿ ಕ್ರೇನ್​ ಮೂಲಕ ಶೂಟಿಂಗ್​ ನಡೆಸಿರುವ ಆರೋಪ ಕೇಳಿ ಬಂದಿದೆ.

ಎರಡು ದಿನಗಳ ಕಾಲ ಮಳೆಯಾಗಿದ್ದರಿಂದ ಮಣ್ಣು ತೇವವಿದ್ದು ಪರಿಣಾಮ ಕ್ರೇನ್​ ಕಲ್ಯಾಣಿಯಲ್ಲಿ ಜಾರಿ ಸಿಕ್ಕಿ ಹಾಕಿಕೊಂಡಿದೆ.

ಇನ್ನು ಕ್ರೇನ್​ ಮೇಲೆಕ್ಕೆತ್ತುವಾಗ ಐತಿಹಾಸಿಕ ಕಲ್ಯಾಣಿಯ ಕಲ್ಲುಗಳಿಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!