ಮೈಸೂರಲ್ಲಿ ಕ್ರೆಡಲ್ ಅಧಿಕಾರಿ ನಿಗೂಢ ಸಾವು : ಮೂರ್ಛೆ ಹೋದ ಪತ್ನಿ, ಪುತ್ರ

Team Newsnap
1 Min Read
Cradle officer mysterious death in Mysore: Wife, son fainted ಮೈಸೂರಲ್ಲಿ ಕ್ರೆಡಲ್ ಅಧಿಕಾರಿ ನಿಗೂಢ ಸಾವು : ಮೂರ್ಛೆ ಹೋದ ಪತ್ನಿ, ಪುತ್ರ

ಮೈಸೂರಿನ ಕ್ರೆಡಲ್ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಬೋಗಾದಿ ನಿವಾಸಿದಲ್ಲಿ ನಡೆದಿದೆ.

ಡಿ.ಕೆ.ದಿನೇಶ್ ಕುಮಾರ್ (50) ಮೃತ ಅಧಿಕಾರಿ. ತೀವ್ರವಾಗಿ ಅಸ್ವಸ್ಥಗೊಂಡಿರುವ ದಿನೇಶ್ ಪತ್ನಿ ಆಶಾ ಮತ್ತು 12 ವರ್ಷದ ಪುತ್ರನನ್ನು ನಗರದ ಸುಯೋಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನಿಟ್ರ್ಯಾಪ್ ಗೆ ಬಲಿ ಬಿದ್ದ ಟೆಕ್ಕಿ : ಮಾಯಾಂಗನೆ ಕೊಟ್ಟಿದ್ದು ಬರೋಬರಿ 20 ಲಕ್ಷ !

ದಿನೇಶ್​ ಬೆಂಗಳೂರಿನ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಯೋಜನಾ ನಿರ್ದೇಶಕರಾಗಿದ್ದರು.

ನಿನ್ನೆ ರಾತ್ರಿ ಜೊತೆಯಲ್ಲೇ ಊಟ ಮಾಡಿ ಮಲಗಿದ್ದೆವು. ಇಂದು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ದಿನೇಶ್‍ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅದನ್ನು ನೋಡಿ ನಾವೂ ಮೂರ್ಛೆ ಹೋದೆವು ಎಂದು ಸುಯೋಗ್ ಆಸ್ಪತ್ರೆಯಲ್ಲಿರುವ ಪತ್ನಿ ಮತ್ತು ಪುತ್ರ ಮಾಹಿತಿ ನೀಡಿದ್ದಾರೆ.

Share This Article
Leave a comment