ಕೋವಿಡ್-19 ಲಸಿಕೆ 90%ನಷ್ಟು ಯಶಸ್ವಿ- ಫೈಜರ್ ಅಧ್ಯಕ್ಷ ಬೋರ್ಲಾ ಹೇಳಿಕೆ
‘ಜಗತ್ತನ್ನೇ ಅಲ್ಲಾಡಿಸುತ್ತಿರುವ ಮಾರಕ ಖಾಯಿಲೆಯಾದ ಕೋವಿಡ್‌ಗೆ ಫೈಜರ್ ಸಂಸ್ಥೆ ತಯಾರಿಸಿರುವ ಲಸಿಕೆಯು ಶೇ. 90%ರಷ್ಟು ಪರಿಣಾಮಕಾರಿಯಾಗಿದೆ’ ಎಂದು ಫೈಜರ್ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಓ ಡಾ ಅಲ್ಬರ್ಟ್ ಬೋರ್ಲಾ ಹೇಳಿದರು.
ಮೂರನೇ ಹಂತದ ಪ್ರಯೋಗದಲ್ಲಿ ಕೋವಿಡ್ 19 ಲಸಿಕೆಯು ಶೇ. 90 ರಷ್ಟು ಯಶಸ್ಸು ಕಂಡಿದೆ. ಎರಡು ಡೋಸ್‌ಗಳಲ್ಲಿ ಸ್ವಯಂ ಸೇವಕರಿಗೆ ನೀಡಿರುವ ಲಸಿಕೆ ಅದ್ಭುತ ಫಲಿತಾಂಶವನ್ನು ನೀಡಿದೆ. ಮೊದಲ ಲಸಿಕೆ ತೆಗೆದುಕೊಂಡ ಜನರಲ್ಲಿ 28 ದಿನಗಳಲ್ಲಿ ಹಾಗೂ ಎರಡನೇ ಲಸಿಕೆ ತೆಗೆದುಕೊಂಡ ಜನರಲ್ಲಿ 7 ದಿನಗಳಲ್ಲಿ ಕೊರೋನಾ ರೋಗ ನಿರೋಧಕ ಶಕ್ತಿ ಇಮ್ಮಡಿಯಾಗಿದೆ ಎಂದು ಅವರು ಹೇಳಿದರು.
ಕೊರೋನಾಗೆ ಫೈಜರ್ ಸಂಸ್ಥೆ ಕಂಡುಹಿಡಿದಿರುವ ಲಸಿಕೆಗೆ ಈಗಾಗಲೇ ಭಾರೀ ಬೇಡಿಕೆ ವ್ಯಕ್ತವಾಗಿದೆ. ಪ್ರಸ್ತುತ ವರ್ಷ 5 ಕೋಟಿ ಡೋಸ್ ಹಾಗೂ ಮುಂದಿನ ವರ್ಷ 13 ಕೋಟಿ ಡೋಸ್ ಲಸಿಕೆ ತಯಾರು ಮಾಡುವ ಯೋಜನೆಯನ್ನು ಫೈಜರ್ ಸಂಸ್ಥೆ ಹಮ್ಮಿಕೊಂಡಿದೆ. ಒಂದು ಡೋಸ್‌ಗೆ 150 ರೂಗಳ ದರ ನಿಗದಿಪಡಿಸಬಹುದು ಎಂದು ಮೂಲಗಳು ಹೇಳಿವೆ. ಪ್ರತಿಯೊಬ್ಬ ಕೊರೋನಾ ಪೀಡಿತರಿಗೂ ಎರಡು ಡೋಸ್ ಲಸಿಕೆ ಬೇಕಾಗುವದರಿಂದ ಒಬ್ಬ ವ್ಯಕ್ತಿಗೆ ಒಟ್ಟು 300 ರೂಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಭಾರತದಲ್ಲೂ ಸಹ ಕೊರೋನಾಗೆ ಔಷಧಿ ಕಂಡು ಹಿಡಿಯಲು ಅನೇಕ ಔಷಧಿ ಸಂಸ್ಥೆಗಳು ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಕೊರೋನಾ ಲಸಿಕೆಯನ್ನು ನೀಡುವಿಕೆಯ ಆದ್ಯತೆಯನ್ನು ಕೋರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳಿಗೆ ಮೀಸಲಿಡಲಾಗುವದೆಂದು ಹೇಳಲಾಗುತ್ತಿದೆ.
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ