ನಾಳೆ ರೋಹಿಣಿ‌, ಅದೃಷ್ಟ ಇತ್ಯರ್ಥ ಸಾಧ್ಯತೆ

Team Newsnap
1 Min Read

ಮೈಸೂರು ಜಿಲ್ಲಾಧಿbಕಾರಿ ರೋಹಿಣಿ ಸಿಂಧೂರಿ ನೇಮಕ ವಿರೋಧಿಸಿ ಐಎಎಸ್ ಅಧಿಕಾರಿ ಬಿ. ಶರತ್ ಸಿಎಟಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ
ಇತ್ಯರ್ಥ ನಾಳೆಯೇ ಆಗುವ ಸಾಧ್ಯತೆ ಇದೆ.
ಈಗಾಗಲೇ ಅರ್ಜಿ ವಿಚಾರಣೆ
ಮಾಡಿರುವ ನ್ಯಾಯಾಲಯದ ನಾಳೆಯೇ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ ಎಂದು‌ ಹೇಳಲಾಗುತ್ತಿದೆ.

ಬಿ. ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಿದ್ದ 29 ದಿನಗಳಲ್ಲೇ, ಅವರನ್ನು ವರ್ಗ‌ಮಾಡಿ‌ ಆ ಜಾಗಕ್ಕೆ ರೋಹಿಣಿಯವರನ್ನು ಸರ್ಕಾರ ತಂದು ಕೂರಿಸಿತ್ತು. ಸರ್ಕಾರದ ನಡೆಯನ್ನು ವಿರೋಧಿಸಿದ ನಿರ್ಗಮಿತ ಜಿಲ್ಲಾಧಿಕಾರಿ ಶರತ್ ಸಿಎಟಿ‌ ನ್ಯಾಯಾಲದಲ್ಲಿ‌ ಅರ್ಜಿ‌ ಸಲ್ಲಿಸಿದ್ದರು. ಪ್ರಕರಣದ ಅರ್ಜಿಯ ವಿಚಾರಣೆ ಪದೇ ಪದೇ ಮುಂದಕ್ಕೆ ಹೋಗುತ್ತಲೇ ಇತ್ತು.

ಹಲವು ದಿನಗಳಿಂದ ವಿಚಾರಣೆ ನಡೆಸಿರುವ ಸಿಎಟಿ ನ್ಯಾಯಾಲಯ ನಾಳೆ ನೀಡಲಿರುವ ತೀರ್ಪು ಶರತ್ ಪರವಾದರೆ, ರೋಹಿಣಿಯವರಿಗೆ ಮಾತ್ರವಲ್ಲದೇ ಸರ್ಕಾರಕ್ಕೂ ಸಹ ತೀವ್ರ ತರಹದ ಸಂಕಷ್ಟವನ್ನು ತಂದೊಡ್ಡಲಿದೆ.

ಕೆಲ ದಿನಗಳ ಹಿಂದೆ ಶರತ್ ತಮಗೆ ನ್ಯಾಯ ಸಿಗುತ್ತಿಲ್ಲವೆಂದು‌ ಖಿನ್ನತೆಗೊಳಗಾಗಿ‌ ಆಸ್ಪತ್ರೆಯನ್ನೂ ಸೇರಿದ್ದರು.

Share This Article
Leave a comment