ನ್ಯೂಸ್ ಸ್ನ್ಯಾಪ್
ನವದೆಹಲಿ
ಕೊರೋನಾ ಮಾಹಾಮಾರಿಯ ಅವತಾರ 2020ಕ್ಕೆ ಅಂತ್ಯಕ್ಕೆ ಕೊನೆಗೊಳ್ಳುವುದಿಲ್ಲ. ಬದಲಿಗೆ 2021ಕ್ಕೂ ಮುಂದುವರೆದು ಸುನಾಮಿ ಸ್ವರೂಪದಲ್ಲಿ ದೇಶದ ಜನರನ್ನು ಕಾಡುತ್ತದೆ ಎಂದು ಕೇಂದ್ರ ಸರ್ಕಾರದ ವಿಶೇಷ ಕಾರ್ಯಪಡೆಯ ಸದಸ್ಯ ಡಾ.ರಣದೀಪ್ ಕುಲೇರಿಯಾ ಭವಿಷ್ಯ ನುಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ರಣದೀಪ್, ಯಾವ ಕಾರಣಕ್ಕೂ ಕೊರೋನಾ ನಿಯಂತ್ರಣಕ್ಕೆ ಬರುವುದಿಲ್ಲ. ಈಗ ಪಟ್ಟಣ ಹಾಗೂ ಸಣ್ಣ ಪುಟ್ಟ ಹಳ್ಳಿಗಳನ್ನು ಪ್ರವೇಶ ಮಾಡಿದೆ. ಈಗಾಗಲೇ ಸಮುದಾಯಕ್ಕೆ ವಿಸ್ತರಿಸಿಕೊಂಡಿರುವುದರಿಂದ ನಾವು ನಿಯಂತ್ರಣಕ್ಕೆ ತರುತ್ತೇವೆ ಎಂದು ಹೇಳುವುದು ಬರಿ ಬಾಯಿ ಮಾತಿನ ಭರವಸೆಯಾಗಬಹುದು ಎಂದು ಹೇಳಿದ್ದಾರೆ.
ದೇಶದ ಜನ ಸಂಖ್ಯೆ 136 ಕೋಟಿ ಇದೆ. ಇದರಲ್ಲಿ ಶೇ.1 ರಷ್ಟು ಜನಕ್ಕೆ ಕೊರೋನಾ ಬಾಧಿಸುತ್ತದೆ ಎಂದರೆ ಕನಿಷ್ಠ 1 ಕೋಟಿ 36 ಲಕ್ಷ ಜನರಿಗೆ ಕೊರೋನಾ ಬರಬೇಕಾಗುತ್ತದೆ. ಈಗ ಕೇವಲ 40 ಲಕ್ಷ ಜನರಿಗೆ ಸೋಂಕು ಬಂದಿದೆ. ಇನ್ನೂ ಅಂದಾಜು 1 ಕೋಟಿ ಜನ ಕೊರೋನಾ ಸೋಂಕು ಬಾಧಿಸುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಕೊರೋನಾ ಸುಲಭವಾಗಿ ತೊಲಗುವುದಿಲ್ಲ ಎಂದು ತಿಳಿಸಿದರು. ದೆಹಲಿಯಲ್ಲಿ ಈಗ ಎರಡನೇ ಹಂತದಲ್ಲಿ ವ್ಯಾಪಿಸತೊಡಗಿದೆ. ಈ ಮೊದಲ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿತ್ತು. ಪ್ರಕರಣಗಳ ಸಂಖ್ಯೆ ಕಡಮೆಯಾಗಿತ್ತು. ಈಗ ಮತ್ತೆ ದೆಹಲಿಯಲ್ಲಿ ನಿಧಾನವಾಗಿ ಕೊರೋನಾ ಹೆಚ್ಚಾಗುತ್ತವೆ. 2 ನೇ ಹಂತಕ್ಕೆ ಕಾಲಿಟ್ಟಿದೆ. ಹೀಗಾಗಿ ಈಗ ಕೊರೋನಾ ಸೋಂಕು ಕಡಮೆ ಆಗಿರುವ ರಾಜ್ಯ ಮತ್ತು ಪಟ್ಟಣಗಳಲ್ಲಿ ಮತ್ತೆ ಕೊರೋನಾ ಸುನಾಮಿ ಏಳು ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಹೇಳಿದರು.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ