ಈಡಿಪಿ ಕುಸಿತಕ್ಕೆ ಜಿಎಸ್‍ಟಿ ಕಾರಣ: ರಾಹುಲ್ ಗಾಂಧಿ

Team Newsnap
1 Min Read

ನವದೆಹಲಿ: ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ಮೋದಿ ಸರ್ಕಾರದ ಜಿಎಸ್‍ಟಿ ಕಾರಣ ಎಂದು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಟೀಕಿಸಿದ್ದಾರೆ. ಮೋದಿ ಸರ್ಕಾರ ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ, ಜಿಎಸ್‍ಟಿ ಎಂಬುದು ತೆರಿಗೆ ವ್ಯವಸ್ಥೆ ಅಲ್ಲ, ಅದು ಬಡವರ ಮೇಲಿನ ದಾಳಿಯಾಗಿದೆ. ಜಿಎಸ್‍ಟಿ ಸಣ್ಣ ಉದ್ಯಮಗಳು, ಉದ್ಯೋಗಗಳನ್ನು ಕಸಿದುಕೊಂಡು ರಾಜ್ಯಗಳ ಆರ್ಥಿಕ ಭವಿಷ್ಯ ನಾಶ ಮಾಡಿದೆ. ಜಿಎಸ್‍ಟಿ ಅಸಂಘಟಿತ ವಲಯದ ಆರ್ಥಿಕತೆ ಮೇಲಿನ ಎರಡನೇ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ಉದ್ಯಮಗಳು ಜಿಎಸ್‍ಟಿಯಡಿ ತೆರಿಗೆ ಸಲ್ಲಿಸಲು ಸಾಧ್ಯವಿಲ್ಲ. ದೊಡ್ಡ ಕಂಪನಿಗಳು 5ರಿಂದ 15 ಖಾತೆಗಳನ್ನು ಹೊಂದುವ ಮೂಲಕ ಸುಲಭವಾಗಿ ಪಾವತಿಸಬಹುದು. ಜಿಎಸ್‍ಟಿ ಮೂಲಕ ಸಂಗ್ರಹಿಸಿದ ಹಣ ರಾಜ್ಯಗಳಿಗೆ ತಲುಪಿಸಲಾಗದೆ, ರಾಜ್ಯ ಸರ್ಕಾರಗಳು ನೌಕರರಿಗೆ ವೇತನ ಪಾವತಿಸಲು ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.

TAGGED: ,
Share This Article
Leave a comment