ಸಾಲಕ್ಕೆ ಹೆದರಿ ಮೈಸೂರಿನಲ್ಲಿ ದಂಪತಿಗಳ ಆತ್ಮಹತ್ಯೆ

Team Newsnap
0 Min Read

ಮಾಡಿರುವ ಸಾಲತೀರಿಸಲು ಯಾವುದೇ ದಾರಿ ಕಾಣದೆ ದಂಪತಿಗಳು ಊಟಕ್ಕೆ ವಿಷ ಬೆರಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಸಾತಗಹಳ್ಳಿ ಬಡಾವಣೆಯಲ್ಲಿ ಜರುಗಿದೆ.

ಸಂತೋಷ್​(26), ಭವ್ಯ(22) ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು

ಕಳೆದ ಕೆಲವು ದಿನಗಳಿಂದ ಆರ್ಥಿಕ ಸಮಸ್ಯೆಗೆ ಸಿಲುಕಿದ್ದ ದಂಪತಿ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ದಂಪತಿಗಳಿಬ್ಬರು ಊಟದಲ್ಲಿ ವಿಷ ಬೆರೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ ಸೇರಿದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share This Article
Leave a comment