ಬಜೆಟ್ ನಂತರ ನಿಗಮ ಮಂಡಳಿಗೆ ನೇಮಕ – ಹೆಸರು ಸೂಚಿಸಲು ಡಿಕೆಶಿ ಆದೇಶ

Team Newsnap
1 Min Read

ಬೆಂಗಳೂರು : ಬಜೆಟ್ ಅಧಿವೇಶನ ಪೂರ್ಣಗೊಳ್ಳುತ್ತಿದ್ದಂತೆ ರಾಜ್ಯದ ವಿವಿಧ ಕಾರ್ಯಕರ್ತರನ್ನು ವಿವಿಧ ನಿಗಮ ಮಂಡಳಿಗೆ ನೇಮಕಾತಿ ಮಾಡಲು ಕಾಂಗ್ರೆಸ್ ಪಕ್ಷ ಸಿದ್ದತೆ ಮಾಡುತ್ತಿದೆ.

ನಿಗಮ ,ಮಂಡಳಿ,ಡಿಸಿಸಿ ಬ್ಯಾಂಕ್ ,ಹಾಲು ಒಕ್ಕೂಟ, ಜಿಲ್ಲಾ ಕೆಡಿಪಿ, ಆರೋಗ್ಯ ರಕ್ಷಾ ಸಮಿತಿ, ಹಾಪಕಾಮ್ಸ್ ,ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ನಗರಾಭಿವೃದ್ಧಿ ಪ್ರಾಧಿಕಾರ,ಆಶ್ರಯ ಸಮಿತಿ, ಆರಾಧನಾ ಸಮಿತಿ,ಭೂ ನ್ಯಾಯ ಮಂಡಳಿ, ಅಕ್ರಮ ಸಕ್ರಮ ಸಮಿತಿ,ಪಿಎಲ್‌ಡಿ ಬ್ಯಾಂಕ್, ಎಪಿಎಂಸಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ನಿರ್ದೇಶಕರು, ಸದಸ್ಯರುಗಳನ್ನು ನಾಮ ನಿರ್ದೇಶನ ಮಾಡಲು ಸಿದ್ದತೆ ನಡೆಸಿದೆ.

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ನಾಮ ನಿರ್ದೇಶನ ಮಾಡಲು ಅರ್ಹರಾದವರನ್ನು ಜಿಲ್ಲಾ,ತಾಲೂಕು,ಕ್ಷೇತ್ರವಾರು ಕಳುಹಿಸುವಂತೆ ದಿ. 22ರಂದು ಪತ್ರ ಬರೆದಿದ್ದಾರೆ.

ಪಕ್ಷದಲ್ಲಿ ಸಕ್ರೀಯವಾಗಿ ದುಡಿದವರಲ್ಲದೇ ಪಕ್ಷದ ಸಂಘಟನೆಗೆ ಹೆಚ್ಚಿನ ಸಮಯ ನೀಡಿ ದುಡಿದವರು ಅಲ್ಲದೇ ಹಲವಾರು ವರ್ಷಗಳ ಕಾಲ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿ ಇದುವರೆಗೆ ಸ್ಥಾನ ಮಾನ ಸಿಗದ ಮುಖಂಡರುಗಳ ಹೆಸರನ್ನು ಸೂಚಿಸುವಂತೆ ಹೇಳಿದ್ದಾರೆ.ಜೂನ್ 30 ಮೈಷುಗರ್ ನಲ್ಲಿ ಕಬ್ಬು ಅರೆಯವ ಕಾರ್ಯ ಆರಂಭ – ಎಂಡಿ

ರಾಜ್ಯ ಮಟ್ಟದ ನಿಗಮ ಮಂಡಳಿಗಳಿಗೆ ನಿರ್ದೇಶಕರನ್ನು ನಾಮ ನಿರ್ದೇಶನ ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರದಿಂದ ಎರಡು ಹೆಸರು ಶಿಫಾರಸು ಮಾಡಲು ಸೂಚಿಸಿದ್ದಾರೆ ನಿಗದಿತ ನಮೂನೆಯಲ್ಲೇ ಶಿಫಾರಸ್ಸು ಪತ್ರ ಕಳುಹಿಸುವಂತೆ ಸೂಚಿಸಿದ್ದಾರೆ.

Share This Article
Leave a comment