February 24, 2026

Newsnap Kannada

The World at your finger tips!

ಮಹಿಳಾ ಟಿ20 ಚಾಲೆಂಜ್ ಟೂರ್ನಿ ರದ್ದಿಗೆ ಬಿಸಿಸಿಐ ಚಿಂತನೆ 6 1

ರಾಜ್ಯದಲ್ಲಿ ಶನಿವಾರ 41,664 ಜನರಿಗೆ ಕೊರೋನಾ; 349 ಸೋಂಕಿತರು ಸಾವು

Spread the love

ರಾಜ್ಯದಲ್ಲಿ ಶನಿವಾರ 41,664 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. 349 ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಶನಿವಾರ 8,326 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,10,019 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,18,345 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 41,664 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

34 ಸಾವಿರ ಮಂದಿ ಗುಣಮುಖ‌:

ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 21,71,931ಕ್ಕೆ ಏರಿಕೆಯಾಗಿದೆ.
ಇಂದು 34,425 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 15,44,982 ಮಂದಿ ಗುಣಮುಖರಾದಂತಾಗಿದೆ.

ಇಂದು 349 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 21,434ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 6,05,494 ಸಕ್ರಿಯ ಪ್ರಕರಣಗಳಿವೆ

ಬೆಂಗಳೂರು ಒಂದರಲ್ಲೇ 13,402 ಹೊಸ ಪ್ರಕರಣಗಳು ದಾಖಲಾಗಿ, 94 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನು ಬಳ್ಳಾರಿಯಲ್ಲಿ 1622, ಬೆಳಗಾವಿ 1502, ದಕ್ಷಿಣ ಕನ್ನಡ 1502, ಹಾಸನ 2443, ಮಂಡ್ಯ 1188, ಮೈಸೂರು 2489, ತುಮಕೂರು 2302 ಹಾಗೂ ಉಡುಪಿಯಲ್ಲಿ 1146 ಹೊಸ ಹಾಗೂ ಉತ್ತರ ಕನ್ನಡದಲ್ಲಿ 1226 ಪ್ರಕರಣಗಳು ದಾಖಲಾಗಿವೆ.

ಜಿಲ್ಲಾವಾರು ವಿವರ:

ಬಾಗಲಕೋಟೆ584
ಬಳ್ಳಾರಿ1622
ಬೆಳಗಾವಿ1502
ಬೆಂಗಳೂರು ಗ್ರಾಮಾಂತರ1265
ಬೆಂಗಳೂರು ನಗರ13402
ಬೀದರ್185
ಚಾಮರಾಜನಗರ535
ಚಿಕ್ಕಬಳ್ಳಾಪುರ595
ಚಿಕ್ಕಮಗಳೂರು1093
ಚಿತ್ರದುರ್ಗ454
ದಕ್ಷಿಣಕನ್ನಡ1787
ದಾವಣಗೆರೆ292
ಧಾರವಾಡ901
ಗದಗ459
ಹಾಸನ2441
ಹಾವೇರಿ267
ಕಲಬುರಗಿ832
ಕೊಡಗು483
ಕೋಲಾರ778
ಕೊಪ್ಪಳ630
ಮಂಡ್ಯ1188
ಮೈಸೂರು2489
ರಾಯಚೂರು467
ರಾಮನಗರ524
ಶಿವಮೊಗ್ಗ1081
ತುಮಕೂರು2302
ಉಡುಪಿ1146
ಉತ್ತರಕನ್ನಡ1226
ವಿಜಯಪುರ789
ಯಾದಗಿರಿ343
error: Content is protected !!