ಮಂಡ್ಯದ ಎರಡು ಹಳ್ಳಿಗಳ 57 ಜನರಿಗೆ ಕೊರೋನಾ:ಗ್ರಾಮಗಳು ಸೀಲ್ ಡೌನ್ – ಶಾಸಕ ಪುಟ್ಟರಾಜು ಭೇಟಿ

Team Newsnap
1 Min Read

ಮಂಡ್ಯದಲ್ಲಿ ಕರೊನಾ 2ನೇ ಅಲೆ ಆರ್ಭಟ ಜೋರಾಗಿದೆ.
ಶುಕ್ರವಾರ 1300 ಕ್ಕೂ ಹೆಚ್ಚು ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.‌

ಮಂಡ್ಯ ಜಿಲ್ಲೆಯ ಹಳ್ಳಿ ಹಳ್ಳಿಗೆ ಹಬ್ಬಿರುವ ಕೊರೊನಾ ಮಹಾಮಾರಿ ವ್ಯಾಪಿಸುತ್ತಿದೆ.

ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕೊರೋನಾ ಸೋಂಕು ಹೆಚ್ಚು ವ್ಯಾಪಿಸಿದೆ.

ಒಂದು ಗ್ರಾಮದಲ್ಲಿ 40, ಮತ್ತೊಂದು ಗ್ರಾಮದಲ್ಲಿ 17 ಮಂದಿಗೆ ಸೋಂಕು.

mudugudore1

ಪಾಂಡವಪುರ ತಾಲ್ಲೂಕಿನ ಕಣಿವೆ ಕೊಪ್ಪಲು ಗ್ರಾಮದಲ್ಲಿ 40ಕ್ಕೂ ಹೆಚ್ಚು ಮಂದಿಗೆ ಸೋಂಕು ಪತ್ತೆ ಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸಿ ಎಸ್ ಪುಟ್ಟರಾಜು, ಅಧಿಕಾರಿ ಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಿದ್ದಾರೆ. ಅಲ್ಲದೇ ಗ್ರಾಮಕ್ಕೆ ಯಾರೇ ಬರುವುದನ್ನು ಅಥವಾ ಗ್ರಾಮದಿಂದ ಹೊರ ಹೋಗುವುದಕ್ಕೆ ನಿರ್ಬಂಧ ಹೇರಲಾಗಿದೆ. ಜನರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಸಕರು ಮಾಹಿತಿ ನೀಡಿದರು.

ಮುಂಡುಗದೊರೆ ಗ್ರಾಮದಲ್ಲಿ 17ಜನರಿಗೆ ಸೋಂಕು. ಶ್ರೀರಂಗಪಟ್ಟಣ ತಾಲೂಕಿನ ಮುಂಡುಗದೊರೆ ಗ್ರಾಮ.ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಎರಡು ಗ್ರಾಮಗಳು ಸೀಲ್ ಡೌನ್ ಮಾಡಲಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್. ಗ್ರಾಮಸ್ಥರಿಗೆ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.‌

Share This Article
Leave a comment