December 26, 2024

Newsnap Kannada

The World at your finger tips!

chikkamagaluru police

ಠಾಣೆಯ ಲಾಕಪ್ ನಿಂದ ಪರಾರಿಯಾದ ಆರೋಪಿ : ಐವರು ಪೋಲಿಸರು ಸಸ್ಪೆಂಡ್

Spread the love

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೋಲಿಸ್ ಠಾಣೆಯಲ್ಲಿ ಲಾಕಪ್ ಚಿಲಕ ತೆಗೆದು ಆರೋಪಿ ಠಾಣೆಯಿಂದ ಎಸ್ಕೇಪ್ ಆಗಿರುವ ಪ್ರಕರಣದ ನಿರ್ಲಕ್ಷ್ಯ ತೋರಿದ ಐವರು ಪೊಲೀಸರು ಸಸ್ಪೆಂಡ್ ಮಾಡಲಾಗಿದೆ.

ಘಟನೆಯ ವಿವರ :

12 ವರ್ಷದ ಬಾಲಕಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಲಾಕಪ್​ನ ಚಿಲಕ ತೆಗೆದು ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿದ್ದಾನೆ.

ಈ ಹಿನ್ನೆಲೆ ಕರ್ತವ್ಯ ಲೋಪ ಎಸಗಿದ್ದಕ್ಕೆ ಎಎಸ್​ಐ ಸೇರಿ 4 ಮಂದಿ ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಬಂಧಿಸಿ ಇಡಲಾಗಿತ್ತು.

ಈ ವೇಳೆ ಆರೋಪಿ ಲಾಕಪ್​ನ ಚಿಲಕ ತೆಗೆದು ಎಸ್ಕೇಪ್ ಆಗಿದ್ದ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚಿಕ್ಕಮಗಳೂರು ಎಸ್​ಪಿ ಅಕ್ಷಯ್ ಐವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಫೋಸ್ಕೋ ಪ್ರಕರಣದ ಆರೋಪಿ ಅರೆಸ್ಟ್ ಆಗಿದ್ದ. ನಂತರ ಲಾಕಪ್ ಚಿಲಕ ತೆಗೆದು ಎಸ್ಕೇಪ್ ಆಗಿದ್ದ. ಸದ್ಯ ಆರೋಪಿಯನ್ನ ಕೊಪ್ಪ ಪಟ್ಟಣದಲ್ಲಿ ಮತ್ತೆ ಬಂಧಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!