ಐಟಿ ದಾಳಿಯಲ್ಲಿ 497ಕೋಟಿ ರು. ಮೌಲ್ಯದ ಹಣ ಚಿನ್ನಾಭರಣ ವಶ

Team Newsnap
1 Min Read

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಬೃಹತ್ ಐಟಿ ದಾಳಿ‌ಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 497 ಕೋಟಿ ರು ಹಣ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಇಲಾಖೆ ಮಾಧ್ಯಮ ಹೇಳಿಕೆಯಲ್ಲಿ . ನಾಲ್ಕು ರಾಜ್ಯಗಳ 47 ಕಡೆಗಳಲ್ಲಿ ನಡೆಸಿದ ಐಟಿ ದಾಳಿಯಲ್ಲಿ 750 ಕೋಟಿ ಆಕ್ರಮ‌ ಆದಾಯ ಪತ್ತೆಯಾಗಿದ್ದು ಇದರಲ್ಲಿ ಒಟ್ಟು 487 ಕೋಟಿ ಆಕ್ರಮ‌ ನಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಹೈವೆ ಪ್ರಾಜೆಕ್ಟ್, ಹಾಗೂ ನೀರಾವರಿ ಇಲಾಖೆ ಸಂಬಂಧ ದಾಳಿ ನಡೆದಿತ್ತು.. ದಾಳಿಯಲ್ಲಿ 4.69 ಕೋಟಿ ನಗದು, 8.62 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 29.83 ಕೋಟಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಬೋಗಸ್ ದಾಖಲೆಗಳನ್ನು ಸೃಷ್ಟಿಸಿಕೊಂಡು ಸರ್ಕಾರದ‌ ಗುತ್ತಿಗೆ‌ ಪಡೆಯುತ್ತಿದ್ದ ಕಂಪನಿಗಳು ಕಾರ್ಮಿಕರಿಗೆ ನೀಡಿದ‌ ಹಣದಲ್ಲಿ ಅವ್ಯವಹಾರ ನಡೆಸಿದ್ದವು ಎಂಬ ಆರೋಪ ಕೇಳಿಬಂದಿದೆ.

ಒಂದು ಗುತ್ತಿಗೆಯನ್ನು ಕಂಪನಿ 40 ಮಂದಿಗೆ ಸಬ್ ಕಂಟ್ರಾಕ್ಟರ್​ಗಳಿಗೆ ನೀಡಿದೆ ಎನ್ನಲಾಗಿದೆ.

ತನಿಖೆ ವೇಳೆ ಪ್ರತಿಯೊಬ್ಬರೂ ದಾಖಲೆಗಳನ್ನು ತಿದ್ದಿ ಗುತ್ತಿಗೆ ಪಡೆದಿರುವುದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಐಟಿ ಸ್ಪಷ್ಟಪಡಿಸಿದೆ.

Share This Article
Leave a comment