ಕಲ್ಲಿದ್ದಲು ಕೊರತೆ : ಸಿಎಂ ನಿವಾಸದಲ್ಲೂ ಪವರ್ ಕಟ್

Team Newsnap
1 Min Read

ಕಲ್ಲಿದ್ದಲು ಕೊರತೆಯಿಂದ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಆರಂಭಿಸಲಾಗುತ್ತಿದೆ ಎಂಬ ಮಾಹಿತಿ ಬೆನ್ನಲ್ಲೇ ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಯಡಿಯೂರಪ್ಪ ನಿವಾಸದ ರಸ್ತೆಯಲ್ಲೂ ಪವರ್ ಕಟ್ ಆಗಿದೆ. ಸಿಎಂ ನಿವಾಸ ಕುಮಾರ ಕೃಪಾ ರಸ್ತೆಗೂ ಲೋಡ್​ ಶೆಡ್ಡಿಂಗ್​ನ ಬಿಸಿ ತಟ್ಟಿದಂತಾಗಿದೆ.

ದೇಶದಾದ್ಯಂತ ಹಲವು ಪವರ್ ಸ್ಟೇಷನ್​ಗಳಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿದೆ. ಈ ಹಿನ್ನೆಲೆ ರಾಜ್ಯದ ಎರಡು ಜಿಲ್ಲೆಗಳ ಪವರ್ ಸ್ಟೇಷನ್​ಗಳಲ್ಲಿ ಬಹುತೇಕ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ.

ಮಳೆಯ ಕಾರಣದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲಿನ ಬೆಲೆ ಏರಿಕೆಯಾಗಿ, ಆಮದು ಕಡಿಮೆಯಾಗಿದೆ ಎಂದು ಹೇಳಲಾಗಿದೆ

ಈ ಮಧ್ಯೆ ಸಿಎಂ ದೆಹಲಿಗೆ ತೆರಳಿದಾಗ ಕಲ್ಲಿದ್ದಲು ಸಚಿವರನ್ನು ಭೇಟಿಯಾಗಿ ಅಗತ್ಯ ಕಲ್ಲಿದ್ದಲು ಪೂರೈಕೆ ಮಾಡುವಂತೆ ಮನವಿ ಮಾಡಿ ಬಂದಿದ್ದಾರೆ. ಇನ್ನು ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಬಗ್ಗೆ ಗಮನಹರಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

Share This Article
Leave a comment