ಪಕ್ಷ ಸೂಚಿಸಿದರೆ ಎಂಪಿ ಚುನಾವಣೆಗೆ ಸ್ಪರ್ಧೆ : ಡಾ ಯತೀಂದ್ರ ಸಿದ್ದರಾಮಯ್ಯ

Team Newsnap
1 Min Read
Contest for MP elections if party suggests: Dr Yatindra Siddaramaiah ಪಕ್ಷ ಸೂಚಿಸಿದರೆ ಎಂಪಿ ಚುನಾವಣೆಗೆ ಸ್ಪರ್ಧೆ : ಡಾ ಯತೀಂದ್ರ #Kannadanews

ಮೈಸೂರು : ಮುಂಬರುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದರೆ ಆದೇಶ ಪಾಲಿಸಲು ನಾನು ಸಿದ್ಧ ಎಂದು ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ಡಾ ಯತೀಂದ್ರ ಲೋಕಸಭೆಗೆ ಸ್ಪರ್ಧೆ ಮಾಡಬೇಕೆಂದು ತಮಗೆ ಬೆಂಬಲಿಗರು ಒತ್ತಾಯಿಸಿರುವ ವಿಚಾರದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನಾಗಲಿ, ತಂದೆಯವರಾಗಲಿ ಚರ್ಚೆ ನಡೆಸಿಲ್ಲ.

ಪಕ್ಷ ಸೂಚಿಸಿದರೆ ಆದೇಶ ಪಾಲಿಸಲು ಸಿದ್ಧ ಎಂದಿದ್ದಾರೆ.ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ : ಟೋಲ್ ಆರಂಭದ ಬೆನ್ನಲ್ಲೇ KSRTC ಬಸ್ ಟಿಕೆಟ್ ದರ ಹೆಚ್ಚಳ

ವರುಣ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಹೆಚ್ಚು ಸಮಯ ಕೊಡಲಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ಥಾನಮಾನದ ನಿರೀಕ್ಷೆಯಲ್ಲಿ ಯತೀಂದ್ರ ಇದ್ದಾರೆ. ಕ್ಷೇತ್ರದಲ್ಲಿ ತಂದೆಯ ಜವಾಬ್ದಾರಿ ನಿಭಾಯಿಸಲು ಯತೀಂದ್ರ ಸರ್ಕಾರಿ ಸ್ಥಾನಮಾನದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

Share This Article
Leave a comment