ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ : ಟೋಲ್ ಆರಂಭದ ಬೆನ್ನಲ್ಲೇ KSRTC ಬಸ್ ಟಿಕೆಟ್ ದರ ಹೆಚ್ಚಳ

Team Newsnap
1 Min Read

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಎರಡನೇ ಟೋಲ್ ಜಾರಿಯಾದ ಹಿನ್ನೆಲೆ ಇಂದಿನಿಂದ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರವೂ ಏರಿಕೆಯಾಗಿದೆ.

ಗಣಂಗೂರು ಟೋಲ್ ಜುಲೈ 1 ರಿಂದ ಆರಂಭವಾಗಿದ್ದು , ಬಸ್‌ಗಳ ಏಕಮುಖ ಸಂಚಾರಕ್ಕೆ 525 ರೂ. ಟೋಲ್ ಸಂಗ್ರಹಿಸಲಾಗುಲಾಗಿತ್ತು.

ಇದನ್ನ ಸರಿದೂಗಿಸಲು ಕೆಎಸ್‌ಆರ್‌ಟಿಸಿ ಈ ಮಾರ್ಗದಲ್ಲಿ ಸಾಮಾನ್ಯ ಸಾರಿಗೆಗೆ 15 ರೂ., ರಾಜಹಂಸಕ್ಕೆ 20 ರೂ., ವೋಲ್ವೋ ಮತ್ತು ಎಲೆಕ್ಟ್ರಿಕ್ ಬಸ್‌ಗಳ ಟಿಕೆಟ್ ದರವನ್ನು 30 ರೂ.ಗಳಷ್ಟು ಹೆಚ್ಚಿಸಿದೆ.

ಸಾಮಾನ್ಯ ಸಾರಿಗೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ 170 ರೂ. ಇತ್ತು, ಈಗ 185 ರೂ. ಆಗಿದೆ. ರಾಜಹಂಸ 230 ರಿಂದ 250 ರೂ.ಗೆ ಏರಿಕೆಯಾಗಿದೆ. ವೋಲ್ವೋ ಅಥವಾ ಇವಿ ಬಸ್‌ಗಳಲ್ಲಿ 330 ರಿಂದ 360 ರೂ.ಗೆ ಟಿಕೆಟ್ ದರ ಹೆಚ್ಚಳವಾಗಿದೆ.

ಬೆಂಗಳೂರು ಬಳಿಯ ಕಣಮಿಣಕಿ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿಯ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಶುರುವಾದಾಗ, ಬಸ್ ಟಿಕೆಟ್ ದರವನ್ನ 20 ರಿಂದ 35 ರೂ.ಗೆ ಹೆಚ್ಚಿಸಲಾಗಿತ್ತು.ಕರ್ನಾಟಕದ ರೈಲ್ವೆ ಇಲಾಖೆಯಲ್ಲಿ 904 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈದೀಗ ಮತ್ತೆ ಬಸ್ ಟಿಕೆಟ್ ದರ ಏರಿಕೆ ಆಗಿರುವುದು ಸಾರಿಗೆ ಸವಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

Share This Article
Leave a comment