ಕಾಂಗ್ರೆಸ್ ಬೆಂಬಲಿತ ಬೋರೇಗೌಡ ಮನ್ ಮುಲ್ ಅಧ್ಯಕ್ಷರಾಗಿ ಆಯ್ಕೆ

Team Newsnap
2 Min Read
Congress-backed Boregowda Mann Mul was elected as the president ಕಾಂಗ್ರೆಸ್ ಬೆಂಬಲಿತ ಬೋರೇಗೌಡ ಮನ್ ಮುಲ್ ಅಧ್ಯಕ್ಷರಾಗಿ ಆಯ್ಕೆ #mandya
  • ಜೆಡಿಎಸ್ ಗೆ ಮುಖಭಂಗ

ಮದ್ದೂರು : ಮನ್ ಮುಲ್ ಅಧ್ಯಕ್ಷರ ಚುನಾವಣೆಯಲ್ಲಿಯೂ ಜೆಡಿಎಸ್ ಗೆ ಜಿಲ್ಲೆಯಲ್ಲಿ ಮುಖಭಂಗವಾಗಿದೆ.

ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮನ್ ಮುಲ್)ದ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿದಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಬೋರೇಗೌಡ ಆಯ್ಕೆಯಾಗುವ ಮೂಲಕ ಜೆಡಿಎಸ್ ಗೆ ಟಾಂಗ್ ನೀಡಲಾಯಿತು.

ಕಾಂಗ್ರೆಸ್ ಬೆಂಬಲಿತ ಬೋರೇಗೌಡ 9 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಬಿಜೆಪಿ ಬೆಂಬಲಿತ ನಿರ್ದೇಶಕ ಎಸ್ ಪಿ ಸ್ವಾಮಿ ಅವರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಮೂವರು ಚುನಾಯಿತ ನಿರ್ದೇಶಕ, ಓರ್ವ ನಾಮನಿರ್ದೇಶಕರು,ನಾಲ್ವರು ಅಧಿಕಾರಿ ಸೇರಿ 8 ಮತದ ಬಲವೊಂದಿದ್ದ ಕಾಂಗ್ರೆಸ್ ಗೆ ಬಿಜೆಪಿಯ ಸಾದೊಳಲು ಸ್ವಾಮಿ ಬೆಂಬಲ ನೀಡಿದ್ದರಿಂದ ಮನ್ ಮುಲ್ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಬಾಚಿಕೊಂಡಿದೆ.

ಮನ್ ಮುಲ್ ನಲ್ಲಿ ಬಿ ಆರ್. ರಾಮಚಂದ್ರ, ರಘುನಂದನ್, ವಿಶ್ವನಾಥ್, ನೆಲ್ಲಿಗೆರೆ ಬಾಲಕೃಷ್ಣ,ಕೋಟೆ ರವಿ,ಎಚ್ ಟಿ ಮಂಜು, ಕಾಡೇನಹಳ್ಳಿ ರಾಮಚಂದ್ರು ಜಾ.ದಳ ಬೆಂಬಲಿತ ಚುನಾಯಿತ ನಿರ್ದೇಶಕರಾಗಿದ್ದಾರೆ
ಯು ಸಿ ಶಿವಕುಮಾರ್, ಬೋರೇಗೌಡ ಮತ್ತು ಡಾಲು ರವಿ ಕಾಂಗ್ರೆಸ್ ಬೆಂಬಲಿತ ಚುನಾಯಿತ ನಿರ್ದೇಶಕರಾಗಿದ್ದರೆ, ಕದಲೂರು ರಾಮಕೃಷ್ಣ ನಾಮನಿರ್ದೇಶನ ನಿರ್ದೇಶಕರಾಗಿದ್ದಾರೆ,

12 ಚುನಾಯಿತ ನಿರ್ದೇಶಕರು ಮತ್ತು ನಾಲ್ವರು ಅಧಿಕಾರಿಗಳು ಮತದಾನದ ಹಕ್ಕು ಹೊಂ ದಿದ್ದರು.
ಅಧ್ಯಕ್ಷರ ಆಯ್ಕೆಗೆ ಕಳೆದ ಜು. 6 ರಂದು ಚುನಾವಣೆ ನಿಗದಿಯಾಗಿತ್ತು,ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧೆ ಬಯಸಿ ಜಾ.ದಳ ಬೆಂಬಲಿತ ರಘುನಂದನ್,ನೆಲ್ಲಿಗೆರೆ ಬಾಲು,ಶಾಸಕ ಎಚ್ ಟಿ ಮಂಜು ಹಾಗೂ ಕಾಂಗ್ರೆಸ್ ಬೆಂಬಲಿತ ಬೋರೇಗೌಡ ನಾಮಪತ್ರ ಸಲ್ಲಿಸಿದ್ದರು.ಚುನಾವಣೆ ಪ್ರಕ್ರಿಯೆ ಮಧ್ಯೆ ನಿರ್ದೇಶಕರಾದ ಬಿ. ಆರ್.ರಾಮಚಂದ್ರ ಮತ್ತು ವಿಶ್ವನಾಥ್ ರವರನ್ನು ಸಹಕಾರ ಸಂಘಗಳ ಆಡಳಿತ ಮಂಡಳಿಯ ಸಭೆಯಲ್ಲಿ ಭಾಗವಹಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಉಪ ವಿಭಾಗ ನ್ಯಾಯಾಲಯ ನಿರ್ಬಂಧ ವಿಧಿಸಿ ಆದೇಶಿಸಿತ್ತು.

WhatsApp Image 2023 07 21 at 9.21.33 PM


ಚುನಾವಣೆ ಸಭೆಗೆ ಕೋರಂ ಅಭಾವ ಉಂಟಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಅಧ್ಯಕ್ಷರ ಚುನಾವಣೆಯನ್ನು ಮುಂದೂಡಿದ್ದರು.ಜುಲೈ 27ರಂದು ಬೆಂಗಳೂರು ಬಂದ್ ?

ಮುಂದೂಡಿದ ಚುನಾವಣೆ ಸಭೆ ಸೋಮವಾರ (ಜು.24 ) ನಿಗದಿಯಾಗಿತ್ತು, ಸಭೆಯಲ್ಲಿ ಮತಕ್ಕೆ ಹಾಕಿದಾಗ ಕಾಂಗ್ರೆಸ್ ಬೆಂಬಲಿತ ಬೋರೇಗೌಡ 9 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿಜೆಪಿ ಬೆಂಬಲಿತ ಸದಸ್ಯ ಎಸ್ ಪಿ ಸ್ವಾಮಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದ ರಿಂದ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಗೆ ವರದಾನವಾಯಿತು.

Share This Article
Leave a comment