ಜುಲೈ 27ರಂದು ಬೆಂಗಳೂರು ಬಂದ್ ?

Team Newsnap
1 Min Read

ಬೆಂಗಳೂರು: ಶಕ್ತಿ ಯೋಜನೆ ವಿರೋಧಿಸಿ ಜು. 27ಕ್ಕೆ ಆಟೋ, ಟ್ಯಾಕ್ಸಿ, ಕ್ಯಾಬ್ ಹಾಗೂ ಖಾಸಗಿ ಬಸ್ ಸಂಘಟನೆಗಳು ಬಂದ್‍ಗೆ ಕರೆಕೊಟ್ಟಿವೆ.

ಸರ್ಕಾರದ ಶಕ್ತಿಯೋಜನೆಯಿಂದ ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳು ಆರೋಪಿಸಿವೆ.

ಶಕ್ತಿ ಯೋಜನೆ ಆಟೋ ಕ್ಯಾಬ್ ಹಾಗೂ ಖಾಸಗಿ ಬಸ್ ಮಾಲೀಕರು ಇದೀಗ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಈ ಹಿನ್ನೆಲೆಯಲ್ಲಿ ಜುಲೈ 27ಕ್ಕೆ 23 ಸಂಘಟನೆಗಳು ಸೇರಿದ ಖಾಸಗಿ ಸಾರಿಗೆ ಒಕ್ಕೂಟ ಸಾಮೂಹಿಕವಾಗಿ ಬಂದ್ ಆಚರಸಿ ಸರ್ಕಾರಕ್ಕೆ ಪ್ರತಿರೋಧ ತೋರಲು ಮುಂದಾಗಿದೆ.

WhatsApp Image 2023 07 21 at 9.21.34 PM

ಜುಲೈ 27ಕ್ಕೆ ಬೆಂಗಳೂರಲ್ಲಿ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಗಳನ್ನು ರಸ್ತೆಗೆ ಇಳಿಸದೆ ಮುಷ್ಕರ ಮಾಡಲು ಮುಂದಾಗಿತ್ತು.

ಖಾಸಗಿ ಸಾರಿಗೆ ಇಲಾಖೆ ಜುಲೈ 27ಕ್ಕೆ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆ ಇಂದು ಸಾರಿಗೆ ಇಲಾಖೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಬಂದ್‍ಗೆ ಕರೆ ಹಾಗೂ ಬೆಂಬಲ ಕೊಟ್ಟಿರುವ ಸಂಘಟನೆಗಳ ಆಹವಾಲು ಸ್ವೀಕರಿಸಲಿದ್ದು, ಆಗುತ್ತಿರುವ ಅನಾನೂಕಲಗಳನ್ನು ಆಲಿಸಲಿದ್ದಾರೆ.ಜಲಾಶಯಗಳ ನೀರಿನ ಮಟ್ಟ

ಒಂದು ವೇಳೆ ಇಂದಿನ ಸಭೆ ಯಶಸ್ವಿಯಾದರೆ ಬಂದ್ ವಾಪಾಸ್ ಪಡೆಯುವ ಸಂಭವವಿದೆ.

Share This Article
Leave a comment