ಕಂಡಕ್ಟರ್ ನಿರ್ಲಕ್ಷ್ಯ : ಯುವತಿ ಮೆದುಳು ನಿಷ್ಕ್ರಿಯ – ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

Team Newsnap
1 Min Read

ಬಸ್ಸಿನಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಕಡೂರು ತಾಲೂಕಿನ ಸೋಮನಹಳ್ಳಿಯ ತಾಂಡ್ಯದ ಯುವತಿ ರಕ್ಷಿತಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಇದೀಗ ಪೋಷಕರು ಆಕೆಯ ಅಂಗಾಂಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ, ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿಗೆ ನೀಡಿದ್ದು, ಮಗಳು ಈ ರೀತಿಯಾದರೂ ಇನ್ನೂ ಹೆಚ್ಚು ದಿನ ಬದುಕಿರಲಿ ಎಂದಿದ್ದಾರೆ.

ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ಬಲಿ ಆಗಿರುವ ಆರೋಪವೂ ಇದೆ, ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ರಕ್ಷಿತಾ, ಬಸ್ಸಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದಷ್ಟು ಚಿಕಿತ್ಸೆ ಬಳಿಕ ವೈದ್ಯರು ರಕ್ಷಿತಾಳ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಪೋಷಕರಿಗೆ ತಿಳಿಸಿದ್ದರು. ನದಿ ತೀರದಲ್ಲಿ ಪಟಾಕಿ ನೆಪದಲ್ಲಿ ಬಾಂಬ್ ಸಿಡಿಸಿ ಪ್ರಯೋಗ ಮಾಡುತ್ತಿದ್ದ ಉಗ್ರ ಯಾಸಿನ್

ಇದೀಗ ಆಕೆಯ ಪೋಷಕರಾದ ಲಕ್ಷ್ಮಿಬಾಯಿ, ತಂದೆ ಸುರೇಶ್ ನಾಯಕ್ ಮಗಳ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ರಕ್ಷಿತಾ ನಾಯಕ್​ರನ್ನ ಇಡಲಾಗಿದೆ. ಸಂಜೆ ಚಿಕ್ಕಮಗಳೂರಿಗೆ ತಜ್ಞರ ತಂಡ ಬರಲಿದೆ. ನಾಳೆ ಮಧ್ಯಾಹ್ನದ ಹೊತ್ತಿಗೆ 2 ಹೆಲಿಕಾಪ್ಟರ್​ನಲ್ಲಿ ಅಂಗಾಂಗ ರವಾನೆ ಆಗಲಿದೆ.

Share This Article
Leave a comment