ಬೆಂಗಳೂರು ( Bangalore ) ಮೂಲದ ಮಾಡೆಲ್ ಹಾಗೂ ಧಾರವಾಹಿ ನಟಿಗೆ ವಂಚನೆ ಆಗಿರುವ ಆರೋಪ ಕೇಳಿಬಂದಿದೆ.
‘ಆಕಾಶ ದೀಪ’ ಸೀರಿಯಲ್ ( Serial ) ದಿವ್ಯಾ ಶ್ರೀಧರ್ಗೆ ತಮಿಳುನಾಡಿನ ಅರ್ನವ್ ಅವರಿಂದ ವಂಚನೆ ಆಗಿದೆ ಎಂಬ ಬಗ್ಗೆ ವಿಡಿಯೋ ( Video ) ಮಾಡಿ ಸ್ವತಃ ದಿವ್ಯಾ ಶ್ರೀಧರ್ ಅವರೇ ಅರ್ನವ್ ವಿರುದ್ಧ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.ಇದನ್ನು ಓದಿ –ಡಿಕೆ ಬ್ರದರ್ಸ್ ಗೆ ಮತ್ತೆ ಇಡಿ ನೋಟಿಸ್ : ನಾಳೆ ವಿಚಾರಣೆಗೆ ಹಾಜರಾಗದಿರಲು ನಿರ್ಧಾರ
ನನಗೆ 2017ರಲ್ಲಿ ಅರ್ನವ್ ಪರಿಚಯ. ಕಳೆದ 5 ವರ್ಷಗಳಿಂದ ಲಿವಿಂಗ್ ರಿಲೇಷನ್ನಲ್ಲಿ ( Living Relationship ) ಇದ್ವಿ. ನಾನು ಅರ್ನವ್ರನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದೆ. ಲಾಕ್ಡೌನ್ನಲ್ಲಿ ( Lockdown ) ಅರ್ನವ್ಗೆ ಯಾವುದೇ ಕೆಲಸ ಇರಲಿಲ್ಲ. ನಾನೇ ಒಂದು ಮನೆ ಖರೀದಿಸಿ ಪ್ರತಿ ತಿಂಗಳು ಹಣ ಕಟ್ಟುತ್ತಿದ್ದೆ. ನಾನೇ ಇಡೀ ಮನೆಯನ್ನು ನಿಭಾಯಿಸುತ್ತಿದ್ದೆ.
ನಂತರ ಇಸ್ಲಾಂ ( Islam ) ಧರ್ಮಕ್ಕೆ ಮತಾಂತರವಾದ ಬಳಿಕ ಮದುವೆ ಆಯಿತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಮತ್ತೊಬ್ಬ ನಟಿಯ ಜತೆ ಅರ್ನವ್ಗೆ ( Anwar ) ಅಕ್ರಮ ಸಂಬಂಧ ಇರೋದು ಗೊತ್ತಾಯಿತು.
ನಾನು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ನಾನು ಗರ್ಭಿಣಿಯಾಗಿದ್ದರೂ ಹಲ್ಲೆ ಮಾಡಿದ್ದಾರೆ. ಹಲ್ಲೆ ( Assault ) ವೇಳೆ ಹೊಟ್ಟೆಗೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಸದ್ಯ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೆ ಯಾವಾಗ ಬೇಕಾದರೂ ಗರ್ಭಪಾತ ಆಗಬಹುದು. ಎಲ್ಲರು ದೇವರಲ್ಲಿ ಬೇಡಿಕೊಳ್ಳಿ. ನನ್ನ ಮಗುವಿಗೆ ಏನೂ ಆಗಬಾರದು ಎಂದು ಪ್ರಾರ್ಥಿಸಿ ಎಂದು ಇನ್ಸ್ಟಾದಲ್ಲಿ ವಿಡಿಯೋ ಆರೋಪಿಸಿದ್ದಾರೆ.
ಅರ್ನವ್ ಹೇಳೋದೇನು..?
ಕನ್ನಡದ ಪಲ್ಲಕ್ಕಿ ಸಿನಿಮಾದಲ್ಲಿ ನಟಿ ದಿವ್ಯಾ ( Divya )ನಟಿಸಿದ್ದಾರೆ. ನಾನು ಎಲ್ಲವನ್ನೂ ಸಹಿಸಿಕೊಂಡು ಅವನಿಗೋಸ್ಕರ ಇದೆ. ಈಗಲೂ ಅವನನ್ನ ಬಿಟ್ಟು ಬದುಕಲು ನನಗೆ ಆಗಲ್ಲ. ನನಗೆ ಅವನು ಬೇಕು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ದಿವ್ಯಾ ಆರೋಪಕ್ಕೆ ಆರೋಪಿ ಅರ್ನವ್ ಪ್ರತಿಕ್ರಿಯಿಸಿದ್ದು, ದಿವ್ಯಾ ಶ್ರೀಧರ್ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ದಿವ್ಯಾ ನನ್ನನ್ನ ಮದುವೆ ( marriage ) ಆಗುವ ಮೊದಲೇ ಮಗು ಇತ್ತು. ಅವಳಿಗೆ ಮಗು ಇರುವ ವಿಚಾರವನ್ನು ಮುಚ್ಚಿಟ್ಟಿದ್ದರು ಎಂದು ಕಿಡಿಕಾರಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ