ಡಿಕೆ ಬ್ರದರ್ಸ್ ಗೆ ಮತ್ತೆ ಇಡಿ ನೋಟಿಸ್ : ನಾಳೆ ವಿಚಾರಣೆಗೆ ಹಾಜರಾಗದಿರಲು ನಿರ್ಧಾರ

Team Newsnap
1 Min Read
My brother has struggled - he should become CM: DK Suresh ನನ್ನ ಅಣ್ಣ ಕಷ್ಟ ಪಟ್ಟಿದ್ದಾರೆ - ಸಿಎಂ ಆಗಬೇಕು ಅಷ್ಟೇ : ಡಿಕೆ ಸುರೇಶ್

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ನಾಳೆ (ಅ.7ರಂದು) ಹಾಜರಾಗದಿರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ ನಿರ್ದರಿಸಿದ್ದಾರೆ.

ಆದರೆ ನಾಳೆಯೇ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ (ED) ಮತ್ತೆ ನೋಟಿಸ್ ನೀಡಿದೆ.ಇದನ್ನು ಓದಿ –ಮಂಡ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪೋಲಿಸರು: ತಪ್ಪಿತಸ್ಥರ ವಿರುದ್ಧ ಕ್ರಮ – ಸಿಎಂ

ಡಿ.ಕೆ ಶಿವಕುಮಾರ್‌ಗೆ ಇಡಿಯಿಂದ ಸಮನ್ಸ್ ಬಂದಿದೆ ನಾಳೆ ದೆಹಲಿಗೆ ವಿಚಾರಣೆಗೆ ಬರಲೇಬೇಕು ಎಂದು ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ ನಾಳೆ ವಿಚಾರಣೆಗೆ ಹಾಜರಾಗದಿರಲು ಡಿ.ಕೆ.ಶಿವಕುಮಾರ್ ಹಾಗೂ ಡಿಕೆ.ಸುರೇಶ್ ನಿರ್ಧರಿಸಿದ್ದಾರೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಮುನ್ನಡೆಯುತ್ತಿದೆ.

ಪಾದಯಾತ್ರೆಯಲ್ಲಿ ಭಾಗವಹಿಸಲಿರುವ ಕಾರಣದಿಂದಾಗಿ ವಿಚಾರಣೆಗೆ ಬೇರೆ ದಿನಾಂಕ ನಿಗದಿ ಮಾಡುವಂತೆ ಡಿಕೆ ಬ್ರದರ್ಸ್ ಇಡಿಗೆ ಮನವಿ ಮಾಡಿದ್ದಾರೆ.

ನಾಳೆ ಪಾದಯಾತ್ರೆ ಆದಿಚುಂಚನಗಿರಿ ಸಮೀಪ ತೆರಳಲಿದೆ ಮಠಕ್ಕೆ ರಾಹುಲ್ ಗಾಂಧಿ ಭೇಟಿ ಇದೆ. ಆ ಸಂದರ್ಭದಲ್ಲಿ ನಾವು ಇರಲೇಬೇಕಾಗುತ್ತದೆ ಎಂದು ಇಡಿಗೆ ಇಮೇಲ್‌ ಮೂಲಕ ಡಿಕೆ ಬ್ರದರ್ಸ್ ಮನವಿ ಮಾಡಿಕೊಂಡಿದ್ದಾರೆ. ಡಿ.ಕೆ.ಸಹೋದರರ ಮನವಿಗೆ ಇಡಿಯಿಂದ ಯಾವುದೇ ಸಮರ್ಪಕ ಪ್ರತಿಕ್ರಿಯೆ ಬಂದಿಲ್ಲ.

ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ಸಂದೇಶವು ಬಂದಿಲ್ಲ. ಆದ್ದರಿಂದ ಕಾನೂನು ತಜ್ಞರ ಸಲಹೆಯಂತೆ ವಿಚಾರಣೆಗೆ ಹಾಜರಾಗದಿರಲು ಡಿಕೆ ಬ್ರದರ್ಸ್ ತೀರ್ಮಾನಿಸಿದ್ದಾರೆ.

Share This Article
Leave a comment