ಮಂಡ್ಯ ತಹಶೀಲ್ದಾರ್ ವಿರುದ್ಧ RTI ಕಾರ್ಯಕರ್ತನಿಂದ ಕಂದಾಯ ಸಚಿವರಿಗೆ ದೂರು

Team Newsnap
1 Min Read

ಮಂಡ್ಯ ತಹಶೀಲ್ದಾರ್, ತಾಲೂಕು ದಂಡಾಧಿಕಾರಿ ಕುಂಜ್ಞ ಅಹಮದ್ ವಿರುದ್ಧ RTI ಕಾರ್ಯಕರ್ತ S ಪೂರ್ಣ ಚಂದ್ರ ಕಂದಾಯ ಸಚಿವ ಅಶೋಕ್ ಅವರಿಗೆ ದೂರು ನೀಡಿದ್ದಾರೆ.

ತಹಶೀಲ್ದಾರ್ ಕುಂಜ್ಞ ಅಹಮದ್ ವಿರುದ್ಧ ಆರ್.ಟಿ.ಐ ಕಾರ್ಯಕರ್ತ ಕೆ.ಆರ್.ರವೀಂದ್ರ ದೂರು ಕೊಟ್ಟಿದ್ದರು.ಇದೀಗ ಮತ್ತೊಬ್ಬ ಹೋರಾಟಗಾರ ಎಸ್.ಪೂರ್ಣಚಂದ್ರ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ದೂರು ನೀಡಿದ್ದಾರೆ
ತಹಶೀಲ್ದಾರ್ ಅಕ್ರಮದ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಧಾರವಾಡದಲ್ಲಿ ವಕೀಲೆ ಜೊತೆ ಅಸಭ್ಯ ವರ್ತನೆ: ಸಿಪಿಐ ವಿರುದ್ದ FIR ದಾಖಲು

ಮಂಡ್ಯ ತಹಶೀಲ್ದಾರ್ ಕುಂಜ್ಞ ಅಹಮದ್, ತಮ್ಮ ಸೇವಾವಧಿಯಲ್ಲಿ ಸಾಕಷ್ಟು ಅಕ್ರಮ-ಅವ್ಯವಹಾರ ನಡೆಸಿದ್ದಾರೆ.
ದಲ್ಲಾಳಿಗಳು, ಹಿಂಬಾಲಕರು, ಬೆಂಬಲಿಗರನ್ನ ಬಿಟ್ಟುಕೊಂಡು ಕಚೇರಿ, ಕಚೇರಿಯಲ್ಲಿರುವ ಪ್ರತ್ಯೇಕ ಕೊಠಡಿ, ಸರ್ಕಾರಿ ನಿವಾಸಗಳಲ್ಲಿ ಅಕ್ರಮ-ಅವ್ಯವಹಾರ ನಡೆಸಿದ್ದಾರೆ ದೂರಿದ್ದಾರೆ ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಭಾವುಕರಾಗಿ ಸ್ವೀಕರಿಸಿದ ಪುನೀತ್ ಪತ್ನಿ ಅಶ್ವಿನಿ
ಅವರ ಸಂಪೂರ್ಣ ಸೇವಾವಧಿಯ ಸಮಗ್ರ ತನಿಖೆ ನಡೆಸಬೇಕು. ಅವರು ಸಂಪಾದಿಸಿರುವ ಅಕ್ರಮ ಹಣ, ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಜೊತೆಗೆ ಈ ಎಲ್ಲಾ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಸಿಸಿಟಿವಿ ದೃಶ್ಯ, ಮೊಬೈಲ್ ಲೊಕೇಷನ್, ಬ್ಯಾಂಕ್ ವಹಿವಾಟು ಮೇಲೆ ನಿಗಾ ಇಟ್ಟು ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Share This Article
Leave a comment