ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಕಾಳಗದಲ್ಲಿ ಪಾಲ್ಗೊಳ್ಳುತ್ತಿದ್ದ ಹುಂಜವೊಂದು ಕಾಲಿಗೆ ಹಾಕಿದ್ದ ಹರಿತವಾದ ಚಾಕುವಿನಿಂದ ಮಾಲೀಕನ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಘಟನೆ ತೆಲಂಗಾಣದಲ್ಲಿ ಶನಿವಾರ ನಡೆದಿದೆ.
ಜಗಳಕ್ಕೆ ಸಿದ್ಧವಾಗಿದ್ದ ಕೋಳಿಯ ಕಾಲುಗಳಿಗೆ ಹರಿತವಾದ ಚಾಕು ಕಟ್ಟಲಾಗಿತ್ತು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಕೋಳಿಯ ಕಾಲುಗಳಿಗೆ ಹಾಕಿದ್ದ ಚೂಪಾದ ಚಾಕು ಮಾಲೀಕನ ಕುತ್ತಿಗೆ ಕೊಯ್ದಿದೆ.
ತೆಲಂಗಾಣದ ಕರೀಂನಗರ ಜಿಲ್ಲೆಯ ಲೋಥನೂರ್ ನಲ್ಲಿ 16 ಜನರ ಗುಂಪು ಅಕ್ರಮವಾಗಿ ಕೋಳಿ ಜಗಳದ ಜೂಜು ಆಯೋಜಿಸಿದ್ದರು.
ಕಾಳಗ ಮುಗಿದ ಮೇಲೆ ಮಾಲೀಕ ಹುಂಜವನ್ನು ಎತ್ತಿ ಕೊಂಡು ಬುಜದ ಮೇಲೆ ಇಟ್ಟುಕೊಂಡು ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಆಗ ಹುಂಜ ಬಿಡಿಸಿಕೊಳ್ಳಲು ಯತ್ನಿಸಿದಾಗ ಮಾಲೀಕನ ಕುತ್ತಿಗೆ ಕೊಯ್ದಿದು ತೀವ್ರ ರಕ್ತ ಸ್ರಾವವಾಗಿದೆ.
ಗಾಯಗೊಂಡ ಮಾಲೀಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮಾಲೀಕ ರಸ್ತೆ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು ಕೋಳಿ ಫಾರಂಗೆ ಬಿಟ್ಟಿದ್ದಾರೆ. ಅಕ್ರಮವಾಗಿ ಕೋಳಿ ಜಗಳದ ಜೂಜು ಆಯೋಜಿಸಿದ್ದ ಇತರ 15 ಮಂದಿ ತಲೆಮರೆಸಿಕೊಂಡಿದ್ದಾರೆ, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ