ಅಕ್ರಮ ಬಿಪಿಎಲ್ ಕಾಡ್೯ ಇದ್ದರೆ ಮಾ. 31 ರೊಳಗೆ ವಾಪಸ್ಸು ಕೊಡಿ : ಇಲ್ಲದಿದ್ದರೆ ಕ್ರಿಮಿನಲ್ ಕೇಸ್ ಗ್ಯಾರೆಂಟಿ

Team Newsnap
1 Min Read

ಮಾರ್ಚ್ 31 ರೊಳಗೆ ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿರುವ ಕುಟುಂಬದವರು ಸ್ವಯಂ ಪ್ರೇರಿತವಾಗಿ ವಾಪಸ್ ನೀಡದಿದ್ದರೆ ಇಲಾಖೆ ಅಧಿಕಾರಿಗಳೇ ಕಾರ್ಯಾಚರಣೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಿದೆ.‌

ರಾಜ್ಯದಲ್ಲಿ ಅಂದಾಜು 10 ಲಕ್ಷ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಆಹಾರ ಇಲಾಖೆ ಮಾಹಿತಿ ಇದೆ.

ಯಾರ ಬಳಿ ಅಕ್ರಮ ಕಾಡ್ ೯ ಇದೆ?

ಸರ್ಕಾರಿ ಅನುದಾನ ಪಡೆಯುತ್ತಿರುವ ಸಿಬ್ಬಂದಿ, ಸರ್ಕಾರಿ ಸ್ವಾಮ್ಯದ ಸಂಸ್ಥೆ, ಮಂಡಳಿ, ನಿಗಮ, ಸ್ವಯತ್ತ ಸಂಸ್ಥೆಯ ಅಧಿಕಾರಿಗಳು, ಸರ್ಕಾರಿ ನೌಕರರು, ವೃತ್ತಿ ತೆರಿಗೆ ಪಾವತಿಸುವ ನೌಕರರು, ಗ್ರಾಮೀಣಾ ಪ್ರದೇಶದಲ್ಲಿ 3 ಹೆಕ್ಟರ್ ಕ್ಕಿಂತ ಹೆಚ್ಚು ಒಣ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು, ನಾಲ್ಕು ಚಕ್ರದ ವಾಹನ ಇರುವ ಕುಟುಂಬಗಳು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಆಹಾರ ಇಲಾಖೆ ಮಾಹಿತಿ ಹಾಗೂ ದಾಖಲೆಗಳನ್ನು ಪತ್ತೆ ಹಚ್ಚಿ‌ಇಟ್ಟುಕೊಂಡಿದೆ.

ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವವರು ಸ್ವಯಂ ಪ್ರೇರಿತವಾಗಿ ಮಾರ್ಚ್ 31 ರೊಳಗೆ ಕಾರ್ಡ್ ಹಿಂದುರಿಗಿಸಬೇಕು. ಇಲ್ಲದಿದ್ದರೆ ಕ್ರೀಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಆಹಾರ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.

ಇನ್ನು ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಇಲಾಖೆ ಬಹುಮಾನ ಘೋಷಿಸಿದೆ, ಅನರ್ಹ ಪಡಿತರ ಚೀಟಿ ಮಾಹಿತಿ ನೀಡಿದರೆ ಸಾರ್ವಜನಿಕರಿಗೆ 400 ರು. ಬಹುಮಾನವೂ ಸಿಗಲಿದೆ. ಮಾಹಿತಿ ಗೌಪ್ಯವಾಗಿ ಇಡಲಾಗುತ್ತದೆ.

Share This Article
Leave a comment