ಮೈಸೂರು: ಮೈಸೂರಿನ ಐತಿಹಾಸಿಕ ಭವ್ಯ ಪರಂಪರೆ ಸಾರುವ ಜಂಬೂ ಸವಾರಿಗೆ ( ಅಂಬಾರಿ ಮೆರವಣಿಗೆಗೆ) ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಆವರಣದಲ್ಲಿ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಸಿಎಂ ಸಿದ್ಧರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್, ರಾಜವಂಶಸ್ಥ ಯದುವೀರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಸಾಥ್ ನೀಡಿದರು.
ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡಿದೆ. ಸತತ 4ನೇ ಬಾರಿ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತಿದ್ದು, ಜಂಬೂ ಸವಾರಿ ಮೆರವಣಿಗೆ, ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್, ತಿಲಕ್ ನಗರ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಲಿದೆ.
ಇದನ್ನು ಓದಿ – ದಸರಾ ಜಂಬೂ ಸವಾರಿಗೆ ಮೆರಗು : 49 ವಿಶೇಷ ಸ್ತಬ್ಧ ಚಿತ್ರಗಳು
ಜಂಬೂಸವಾರಿಯಲ್ಲಿ 49 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿವೆ ಲಕ್ಷಾಂತರ ಜನರು ದಸರಾ ಜಂಬೂಸವಾರಿ ವೀಕ್ಷಣೆಯಲ್ಲಿ ಸಾಕ್ಷಿಯಾಗಿ ತಾಯಿಗೆ ಭಕ್ತಿ ಭಾವದ ನಮನ ಸಲ್ಲಿಸಿದರು .
More Stories
ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ